alex Certify ಆಗಸ್ಟ್ 15 ರಂದೇ ಧೋನಿ ನಿವೃತ್ತಿ ಘೋಷಿಸಿದ್ದೇಕೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 15 ರಂದೇ ಧೋನಿ ನಿವೃತ್ತಿ ಘೋಷಿಸಿದ್ದೇಕೆ ಗೊತ್ತಾ…?

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಆಗಸ್ಟ್ 15 ರಂದು ಸಂಜೆ 19.29 ಗಂಟೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಅವರು ಇದೇ ಸಮಯವನ್ನು ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಕುರಿತಾಗಿ ಅಭಿಮಾನಿಗಳು ಕುತೂಹಲ ಹೊಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕ, ಆಟಗಾರನಾಗಿದ್ದ ಧೋನಿ ನಿವೃತ್ತಿ ಘೋಷಿಸಿದ ದಿನ ಭಾರತದ 74ನೇ ಸ್ವಾತಂತ್ರ್ಯದ ದಿನವಾಗಿದೆ.

19.29 ರಿಂದ ನನ್ನನ್ನು ನಿವೃತ್ತ ಎಂದು ಪರಿಗಣಿಸಿ ನಿಮ್ಮೆಲ್ಲರ ಪ್ರೀತಿಗೆ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಧೋನಿ ಇನ್ ಸ್ಟಾಗ್ರಾಂನಲ್ಲಿ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ಪ್ರವೇಶ, ದಾಖಲೆಗಳು, ಸ್ಮರಣೀಯ ಪಂದ್ಯಗಳು, ಟ್ರೋಫಿ ಗೆಲ್ಲುವುದು, ಕೊನೆಯ ಪಂದ್ಯದಲ್ಲಿ ರನ್ ಔಟ್ ಆಗುವುದನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ.

ಧೋನಿ ನಿವೃತ್ತಿ ಘೋಷಣೆಗೆ ಆಯ್ಕೆ ಮಾಡಿಕೊಂಡ ದಿನ ಮತ್ತು ಸಮಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆದಿದೆ. ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಲಾಗಿದೆ. ಆದರೆ 19.29 ರ ನಂತರ ನನ್ನನ್ನು ನಿವೃತ್ತನೆಂದು ಪರಿಗಣಿಸಿ ಎಂದು ಧೋನಿ ಹೇಳಿದ ಸಮಯದ ಕಾರಣವನ್ನು ಹುಡುಕಲು ಅನೇಕರು ಪ್ರಯತ್ನ ನಡೆಸಿದ್ದಾರೆ.

ಧೋನಿ ಜರ್ಸಿ ಸಂಖ್ಯೆ 7, ಅವರ ಜೊತೆಗೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ ಜರ್ಸಿ ಸಂಖ್ಯೆ 3. ಅವೆರಡು ಸೇರಿ 73 ಆಗುತ್ತದೆ. ಭಾರತ ಸ್ವಾತಂತ್ರ್ಯ ಪಡೆದು 73 ವರ್ಷ ಪೂರ್ಣಗೊಂಡಿದೆ. ನಿವೃತ್ತಿ ಘೋಷಿಸಿದ ಸುರೇಶ್ ರೈನಾ ಭಾರತ ಧ್ವಜದ ಎಮೋಜಿಗಳನ್ನು ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋತ ಸಮಯವಾದ್ದರಿಂದ 19.29 ರ ಸಮಯದಲ್ಲೇ ಧೋನಿ ನಿವೃತ್ತಿ ಘೋಷಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಅವರ ಕೊನೆಯ ಅಂತರಾಷ್ಟ್ರೀಯ ಪಂದ್ಯವು ಅದಾಗಿದೆ. ಮತ್ತೆ ಕೆಲವು ಕ್ರಿಕೆಟ್ ಅಭಿಮಾನಿಗಳು 19.29 ಗ್ರೇಟ್ ಡಿಪ್ರೆಶನ್ ಸಮಯವಾಗಿದೆ. ಧೋನಿ ನಿವೃತ್ತಿ ಸಮಯಕ್ಕೆ ಸಂಬಂಧವಿದೆ ಎಂದು ತಿಳಿಸಿದ್ದಾರೆ. 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಧೋನಿ 2017ರಲ್ಲಿ ಸೀಮಿತ ಓವರುಗಳ ತಂಡದ ನಾಯಕನ ಸ್ಥಾನ ತೊರೆದರು. 538 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 332 ರಲ್ಲಿ ಅವರು ನಾಯಕನಾಗಿ ಆಟವಾಡಿದ್ದಾರೆ. ಕಳೆದ ತಿಂಗಳು 39ನೇ ವರ್ಷಕ್ಕೆ ಕಾಲಿಟ್ಟ ಧೋನಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಏಕೈಕ ನಾಯಕನಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...