![Why Cricket Players are Spotted Wearing Two Caps During IPL 2020? All You Need to Know](https://images.news18.com/ibnlive/uploads/2020/10/1603358796_untitled-design-2020-10-22t145549.084.png)
ಕರೊನಾ ವೈರಸ್ನಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಸಾಮಾಜಿಕ ಅಂತರ , ಮಾಸ್ಕ್ ಅಂತಾ ಜನರು ಹೊಸ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಈ ಕೋವಿಡ್ ಭಯದ ನಡುವೆಯೇ 13ನೇ ಆವೃತ್ತಿಯ ಐಪಿಎಲ್ ಸೀಸನ್ ಕೂಡ ನಡೀತಾ ಇದೆ. ಆಡಿಯನ್ಸ್ ಇಲ್ಲದೇ ಈ ಬಾರಿ ಐಪಿಎಲ್ ಟೂರ್ನಿಯನ್ನ ಆಯೋಜಿಸಲಾಗಿದೆ.
ಐಪಿಎಲ್ನಲ್ಲಿ ಭಾಗಿಯಾಗಿರುವ ಆಟಗಾರರಿಗೂ ಕೂಡ ಹಲವು ನಿಯಮಾವಳಿಗಳನ್ನ ಫಿಕ್ಸ್ ಮಾಡಲಾಗಿದೆ. ಹೊಸ ರೂಲ್ಸ್ ಜೊತೆ ಜೊತೆಗೆ ಈ ಬಾರಿ ಆಟದ ಮೈದಾನದಲ್ಲಿ ಹಲವು ಬದಲಾವಣೆಗಳನ್ನ ನೀವು ಗಮನಿಸಿರಬಹುದು. ಎಷ್ಟೋ ಬಾರಿ ಆಟಗಾರರು ತಲೆ ಮೇಲೆ ಎರಡು ಅಥವಾ ಮೂರು ಕ್ಯಾಪ್ಗಳನ್ನ ಹಾಕಿರೋದನ್ನ ನೀವು ನೋಡಿರಬಹುದು.
ಈ ರೀತಿ ಕ್ರಿಕೆಟ್ ಆಟಗಾರರು ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸೋಕೆ ಕರೊನಾ ಕಾರಣವಂತೆ. ಕರೊನಾ ನಿಯಂತ್ರಣಕ್ಕಾಗಿ ಐಸಿಸಿ ಮಾಡಿರುವ ನಿಯಮಾವಳಿಗಳಲ್ಲಿ ಇದೂ ಕೂಡ ಒಂದಂತೆ.
ಮೈದಾನದಲ್ಲಿರುವ ಆಟಗಾರರು ಕಾರಣವಿಲ್ಲದೇ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ. ಕ್ಯಾಪ್, ಟವೆಲ್ ಹಾಗೂ ಸನ್ಗ್ಲಾಸ್ಗಳನ್ನ ವಿನಿಮಯ ಮಾಡಿಕೊಳ್ಳುವಂತಿಲ್ಲ. ಅವರವರ ವಸ್ತುಗಳಿಗೆ ಆಟಗಾರರೇ ಜವಾಬ್ದಾರರು. ಬೌಲಿಂಗ್ ಮಾಡುವ ವೇಳೆಯೂ ತಮ್ಮ ವಸ್ತುಗಳನ್ನ ಬೇರೆಯವರ ಕೈಗೆ ಕೊಡುವಂತಿಲ್ಲ ಅಂತಾ ಐಸಿಸಿ ಹೇಳಿದೆ. ಇದೇ ಕಾರಣಕ್ಕೆ ಆಟಗಾರರು ಎರಡು ಅಥವಾ ಮೂರು ಕ್ಯಾಪ್ಗಳನ್ನ ಹಾಕಿಕೊಂಡಿರ್ತಾರಂತೆ.
ಅಲ್ಲದೇ ವಿಕೆಟ್ ಪಡೆದ ಸಂಭ್ರಮವಿರಲಿ ಇಲ್ಲವೇ ಮ್ಯಾಚ್ ಗೆದ್ದ ಖುಷಿ ಇರಲಿ ಯಾರೂ ಕೂಡ ಒಬ್ಬರನ್ನೊಬ್ಬರು ಮುಟ್ಟಿಕೊಂಡು ಸಂಭ್ರಮಿಸೋ ಹಾಗೇ ಇಲ್ಲ. ಬೆರಳು ಅಥವಾ ಮುಷ್ಟಿಯನ್ನ ಮುಟ್ಟಿ ಮಾತ್ರ ಆಟಗಾರರು ಮಾತನಾಡಬಹುದಾಗಿದೆ.