ಟೀಂ ಇಂಡಿಯಾ ಮಾಜಿ ಆಟಗಾರ ರವಿಶಾಸ್ತ್ರಿ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಿದ ಬಳಿಕವೂ ಟೀಂ ಇಂಡಿಯಾ ನಡುವಿನ ಸಂಪರ್ಕವನ್ನ ಕೊನೆಗಾಣಿಸಿಕೊಂಡಿಲ್ಲ. ಯಾವುದಾದರೊಂದು ರೀತಿಯಲ್ಲಿ ಬಿಸಿಸಿಐ ಜೊತೆ ರವಿಶಾಸ್ತ್ರಿ ಸಂಪರ್ಕದಲ್ಲಿ ಇದ್ದೆ ಇರ್ತಾರೆ. ಕಮೆಂಟೇಟರ್ ಆಗಿಯೋ ಇಲ್ಲವೇ ಹೆಡ್ ಕೋಚ್ ಆಗಿಯೋ 62 ವರ್ಷದ ಈ ಆಟಗಾರ ಟೀಂ ಇಂಡಿಯಾಗೆ ತನ್ನದೇ ಆದ ಸೇವೆಯನ್ನ ನೀಡ್ತಿದ್ದಾರೆ.
ರವಿಶಾಸ್ತ್ರಿ ಜುಲೈ 2017ರಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಕೋಚ್ ಆಗಿ ನೇಮಕಗೊಂಡರು. ಇದಾದ ಬಳಿಕ 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿ ವೇಳೆಯಲ್ಲಿ ಇವರನ್ನ ಮರುನೇಮಕ ಮಾಡಲಾಯ್ತು. ಇದೀಗ ಟಿ 20 ವಿಶ್ವಕಪ್ ಟೀಂ ಇಂಡಿಯಾಗೆ ರವಿ ಶಾಸ್ತ್ರಿ ಅಣಿಗೊಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿ ಸಂಬಳವೆಷ್ಟು ಅನ್ನೋ ಪ್ರಶ್ನೆ ಸಾಮಾಜಿಕ ವಲಯದಲ್ಲಿ ಹರಿದಾಡ್ತಿದೆ. ರವಿಶಾಸ್ತ್ರಿಯ ಸಂಪತ್ತು ಹಾಗೂ ಅವರ ಬಳಿ ಇರುವ ಐಶಾರಾಮಿ ಕಾರುಗಳು ಇಂತಹದ್ದೊಂದು ಪ್ರಶ್ನೆಯನ್ನ ಹುಟ್ಟು ಹಾಕಿದೆ.
ರವಿಶಾಸ್ತ್ರಿಯ ಆದಾಯದ ಮೂಲ ಅವರ ಸಂಬಳವಾಗಿದೆ. ಮೂಲಗಳ ಪ್ರಕಾರ ರವಿಶಾಸ್ತ್ರಿ ವಿಶ್ವದಲ್ಲೇ ಅತಿಹೆಚ್ಚು ಸಂಭಾವನೆ ಪಡೆದುಕೊಳ್ಳುವ ಕೋಚ್ ಅಂತೆ..! ಇವರು 9.5 ಕೋಟಿ ರೂಪಾಯಿಯಿಂದ 10 ಕೋಟಿ ರೂಪಾಯಿವರೆಗೆ ಬಿಸಿಸಿಐನಿಂದ ಸಂಬಳ ಪಡೆಯುತ್ತಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿದೆ.
ರವಿಶಾಸ್ತ್ರಿ ಒಟ್ಟು ಆದಾಯ 8 ಮಿಲಿಯನ್ ಡಾಲರ್ ಆಗಿದೆ. ಅಲ್ಲದೇ ಇವರ ಬಳಿ ಸಾಕಷ್ಟು ಐಶಾರಾಮಿ ಕಾರು ಹಾಗೂ ಮುಂಬೈನಲ್ಲಿ ಬಂಗಲೆ ಕೂಡ ಇದೆ. ಇದಲ್ಲದೆ, ಶಾಸ್ತ್ರಿ ಇಂಡಿಯಾ ರಿಸೋರ್ಸಸ್ ಲಿಮಿಟೆಡ್ ಮಂಡಳಿಯ ಕಾರ್ಯತಂತ್ರದ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಭಾರತೀಯ ಶಿಕ್ಷಣ ಸಂಸ್ಥೆಯಾದ ಗ್ರೇಸೆಲ್ಸ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಅವರು 58.8 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.
ರವಿಶಾಸ್ತ್ರಿ ಬಳಿ ಅತ್ಯದ್ಭುತ ಕಾರು ಸಂಗ್ರಹವಿದೆ. 1985ರಲ್ಲಿ ಆಡಿ ಎ6 ಪಡೆಯುವ ಮೂಲಕ ತಮ್ಮ ಕಾರು ಪ್ರೇಮವನ್ನ ತೋರಿದ್ದರು. ಇದು ಮಾತ್ರವಲ್ಲದೇ ಶಾಸ್ತ್ರಿ ಬಳಿ ಫೋರ್ಡ್ ಹಾಗೂ ಬಿಎಂಡಬ್ಲೂ ಸಂಗ್ರಹ ಕೂಡ ಇದೆ.
ಕಳೆದ ವರ್ಷದವರೆಗೂ ರವಿಶಾಸ್ತ್ರಿ ಮುಂಬೈನಲ್ಲಿ 11.2 ಕೋಟಿ ರೂಪಾಯಿ ಮೌಲ್ಯದ ಬಂಗಲೆಯಲ್ಲಿ ವಾಸವಿದ್ದರು. ಇದೀಗ ಅವರು ಅಲಿಬಾಗ್ಗೆ ಶಿಫ್ಟ್ ಆಗಿದೆ. ಸಂದರ್ಶನವೊಂದರಲ್ಲಿ ರವಿ ಶಾಸ್ತ್ರಿ 1992ರಲ್ಲಿ ನಾನು ಹಾಗೂ ನನ್ನ ಪತ್ನಿ ಅಲಿಭಾಗ್ನಲ್ಲಿ ಸುಂದರ ಮನೆ ನಿರ್ಮಿಸಿದ್ದೇವೆ ಎಂದು ಹೇಳಿಕೊಂಡಿದ್ದರು.
ರವಿಶಾಸ್ತ್ರಿ 1990ರಲ್ಲಿ ರೀತು ಸಿಂಗ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2012ರಲ್ಲಿ ರವಿಶಾಸ್ತ್ರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿಗೆ 13 ವರ್ಷದ ಅಲೇಖಾ ಶಾಸ್ತ್ರಿ ಎಂಬ ಮಗಳು ಇದ್ದಾಳೆ. ರವಿಶಾಸ್ತ್ರಿ ತಾಯಿಯ ಹೆಸರು ಲಕ್ಷ್ಮೀ ಶಾಸ್ತ್ರಿ.