ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಕನ್ನಡಿಗ ಮಯಂಕ್ ಅಗರವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ ವೃತ್ತಿ ಜೀವನದ ನಾಲ್ಕನೇ ಶತಕವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ ಮಯಾಂಕ್ ಅಗರವಾಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಅಜೇಯ 120 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 44, ಚೇತೇಶ್ವರ ಪೂಜಾರ 0, ವಿರಾಟ್ ಕೊಹ್ಲಿ 0, ಶ್ರೇಯಸ್ ಅಯ್ಯರ್ 18, ವೃದ್ಧಿಮಾನ್ ಶಹಾ ಅಜೇಯ 25 ರನ್ ಗಳಿಸಿದ್ದಾರೆ. ಭಾರತ 70 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ. ನ್ಯೂಜಿಲೆಂಡ್ ಪರ ಏಜಾಜ್ ಪಟೇಲ್ 4 ವಿಕೆಟ್ ಗಳಿಸಿದ್ದಾರೆ.