alex Certify ಬೆರಗಾಗಿಸುತ್ತೆ 2 ವರ್ಷದ ಬಾಲಕನ ʼಫುಟ್ಬಾಲ್ʼ ಪ್ರೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ 2 ವರ್ಷದ ಬಾಲಕನ ʼಫುಟ್ಬಾಲ್ʼ ಪ್ರೀತಿ

ಜಾಗತಿಕ ಕ್ರೀಡೆಯಾದ ಫುಟ್ಬಾಲ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಕ್ರೀಡಾಂಗಣದಲ್ಲಿ ಅವರುಗಳ ಥರಾವರಿ ವೇಷಭೂಷಗಳನ್ನು ನೋಡುವುದೇ ಒಂದು ಖುಷಿ.

ದೊಡ್ಡವರದ್ದು ಒಂದು ರೀತಿಯ ಮೋಜಾದರೆ ಪುಟ್ಟ ಮಕ್ಕಳೂ ಸಹ ಆಟದ ಮೇಲಿನ ತಮ್ಮ ಕ್ಯೂಟ್ ಅಭಿಮಾನದಿಂದ ಬಹಳ ಮುದ್ದಾಗಿ ಕಾಣುತ್ತಾರೆ. ಇಂಥದ್ದೇ ಒಂದು ನಿದರ್ಶನದ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಸ್ಕಾಟ್ಲೆಂಡ್‌ನ ಗ್ಲಾಸ್ಗೌನಲ್ಲಿ 2 ವರ್ಷದ ಪುಟಾಣಿ ಬಾಲಕನೊಬ್ಬ ತನ್ನ ಮೆಚ್ಚಿನ ಕ್ರೀಡೆಯನ್ನು ಟಿವಿ ಪರದೆ ಮೇಲೆ ನೋಡಿಕೊಂಡು ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಆಟಗಾರರು ಗೋಲ್ ಬಾರಿಸಿದ ಕೂಡಲೇ, ಬಲೇ ಖುಷಿಯಾಗಿ ತನ್ನ ಕೋಣೆಯ ತುಂಬೆಲ್ಲಾ ತನ್ನದೇ ಮುದ್ದು ಭಾಷೆಯಲ್ಲಿ ’’ಗೋ…ಗೋ…’’ ಎಂದುಕೊಂಡು ಓಡಾಡುವ ವಿಡಿಯೋ ವೈರಲ್ ಆಗಿದೆ.

https://twitter.com/MarieConroy11/status/1281700662435131392?ref_src=twsrc%5Etfw%7Ctwcamp%5Etweetembed%7Ctwterm%5E1281700662435131392%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwatch-this-kid-cheering-for-his-favourite-football-team-is-giving-us-major-fan-goals-2711777.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...