ಬರ್ಮಿಂಗ್ ಹ್ಯಾಮ್: ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಶನಿವಾರ ಎಡ್ಜ್ ಬಾಸ್ಟನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನ ಎರಡನೇ ದಿನದಂದು 84 ನೇ ಓವರ್ ನಲ್ಲಿ ಇಂಗ್ಲೆಂಡ್ ನ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ವಿರುದ್ಧ 29 ರನ್ ಗಳಿಸುವ ಮೂಲಕ ನಾಯಕನಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಮಾಡಿದ್ದಾರೆ.
ವೇಗದ ಬೌಲರ್ ಬುಮ್ರಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಒಂದೇ ಓವರ್ ನಲ್ಲಿ 29 ರನ್ ಗಳಿಸಿದ್ದಾರೆ. 2003 -4 ರಲ್ಲಿ ವೆಸ್ಟ್ ಇಂಡೀಸ್ ನ ಬ್ರಯಾನ್ ಲಾರಾ, ಆಸ್ಟ್ರೇಲಿಯಾದ ಜಾರ್ಜ್ ಬೇಯ್ಲಿ ಒಂದೇ ಓವರ್ ನಲ್ಲಿ 28 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ವೇಗಿ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಬುಮ್ರಾ 29 ರನ್ ಗಳಿಸಿದ್ದು, 5 ವೈಡ್, 1 ನೋಬಾಲ್ ನಿಂದ 35 ರನ್ ಬಂದಿವೆ. ಬುಮ್ರಾ ನಾಲ್ಕು ಬೌಂಡರಿಗಳು, ಎರಡು ಸಿಕ್ಸರ್ ಸಿಡಿಸಿದ್ದಾರೆ. ಬುಮ್ರಾ 16 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗಿ ಉಳಿದರು.