ಕೃತಕ ಬುದ್ಧಿಮತ್ತೆ ಅದೆಷ್ಟೇ ಮುಂದುವರೆದರೂ ಸಹ ಮಾನವನ ಬುದ್ಧಿಮತ್ತೆಗೆ ಹಾಗೂ ಆಲೋಚನಾ ಶಕ್ತಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಮತ್ತೊಂದು ನಿದರ್ಶನ ಸ್ಕಾಟ್ಲೆಂಡ್ ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಜರುಗಿದೆ.
ಇಲ್ಲಿನ ಕಲೇಡೋನಿಯನ್ ಕ್ರೀಡಾಂಗಣದಲ್ಲಿ ನಡೆದ ಎರಡು ಕ್ಲಬ್ಗಳ ನಡುವಿನ ಪಂದ್ಯವೊಂದರಲ್ಲಿ ರೆಫ್ರಿಯಾಗಿದ್ದ ವ್ಯಕ್ತಿಗೆ ಬೋಳುತಲೆಯಿತ್ತು. ಅದನ್ನೇ ಫುಟ್ಬಾಲ್ ಎಂದು ತಪ್ಪಾಗಿ ಗ್ರಹಿಸಿದ ಎಐ ಕ್ಯಾಮೆರಾ, ಭಾರೀ ಎಡವಟ್ಟಿಗೆ ಕಾರಣವಾಗಿದೆ.
ಮದ್ಯಾಹ್ನದ ಬಿಸಿಲಿನಿಂದ ರೆಫ್ರಿ ತಲೆ ಇನ್ನಷ್ಟು ಹೊಳೆಯುತ್ತಿದ್ದ ಕಾರಣದಿಂದ ಕ್ಯಾಮೆರಾಗೆ ಚೆಂಡು ಹಾಗೂ ರೆಫ್ರಿ ತಲೆಯ ನಡುವೆ ವ್ಯತ್ಯಾಸ ಅರಿಯಲು ಸಾಧ್ಯವಾಗಿಲ್ಲ. ಇದರಿಂದ ವೀಕ್ಷಕ ವಿವರಣೆಗಾರರಿಗೆ ಸಾಕಷ್ಟು ಗೊಂದಲವುಂಟಾಗಿತ್ತು.
https://www.youtube.com/watch?v=9zoJP2FkpgU&feature=emb_logo