
ಐರ್ಲ್ಯಾಂಡ್: ಕೊರೊನಾ ಲಾಕ್‌ಡೌನ್‌ನಿಂದ ಈಜುಕೊಳಕ್ಕೆ ಹೋಗಿ ತರಬೇತಿ ಪಡೆಯಲಾಗದ ಅಂಧ ಕ್ರೀಡಾಪಟು ತನ್ನ ದಿನನಿತ್ಯದ ತರಬೇತಿಗೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.
ಮನೆಯ ಪೆಟ್ಟಿಗೆಯೊಂದರಲ್ಲಿ ನೀರು ತುಂಬಿ ಎದೆಗೆ ಹಗ್ಗ ಕಟ್ಟಿಕೊಂಡು ಅದನ್ನು ಪೆಟ್ಟಿಗೆಯ ಪಟ್ಟಿಗೆ ಗಟ್ಟಿಯಾಗಿ ಬಿಗಿದು ಅದರಲ್ಲಿ ಈಜಾಡುವ ಮೂಲಕ ತಮ್ಮ ದೇಹವನ್ನು ಹಾಗೂ ಈಜುವ ಕೌಶಲವನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ.
ಪಶ್ಚಿಮ ಐರ್ಲ್ಯಾಂಡ್‌ನ ಲಯೋ ಹೈನೆಸ್ ಅವರ ಕಣ್ಣಿನ ಕಪ್ಪು ಗುಡ್ಡೆಗಳು ಹಾಳಾಗಿ 2015 ರಲ್ಲಿ ಅಂಧರಾಗಿದ್ದಾರೆ. ಆದರೂ ಛಲ ಬಿಡದೇ ಈಜುಗಾರರಾಗಿದ್ದಾರೆ.
ಟೊಕಿಯೋ ಪ್ಯಾರಾ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಅವರು ತಯಾರಿ ನಡೆಸಿದ್ದರು. ಆದರೆ, ಈ ನಡುವೆ ಒಲಂಪಿಕ್ಸ್ ಕ್ರೀಡಾಕೂಟ ಮುಂದೆ ಹೋಗಿದೆ. ಆದರೆ, ಒಮ್ಮೆ ಬಿಟ್ಟರೆ ಮತ್ತೆ ದೇಹದ ಸ್ಥಿಮಿತವನ್ನು ಕಾಪಾಡಿಕೊಳ್ಳುವುದು ಕಷ್ಟ ಎಂದು ಅವರು ಈ ವಿಧಾನ ಅನುಸರಿಸಿದ್ದಾರೆ.
‘ನಾನು ಕೈ ಕಾಲು ಬಡಿಯುತ್ತಿದ್ದೆ. ಆದರೆ, ಎಲ್ಲಿಗೂ ಹೋಗುತ್ತಿರಲಿಲ್ಲ. ಆದರೆ, ಇದರಿಂದ ನಾನು ಈಜಿದ ಅನುಭವವಾಗುತ್ತಿತ್ತು’ ಎಂದು ಹೈನೆಸ್ ಎಎಫ್‌ಪಿ ನ್ಯೂಸ್ ಏಜೆನ್ಸಿಗೆ ಹೇಳಿದ್ದಾರೆ.