
ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹೋದರ ಸ್ನೇಹಾಶಿಶ್ ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ವಾರವಷ್ಟೇ ಸ್ನೇಹಾಶಿಸ್ ಅವರ ಅತ್ತೆ – ಮಾವ ಮತ್ತು ಓರ್ವ ಮನೆಕೆಲಸದವನಿಗೆ ಕೊರೊನಾ ದೃಢಪಟ್ಟಿದ್ದು, ಈಗ ಸ್ನೇಹಾಶಿಶ್ ರವರ ಪತ್ನಿಗೂ ಸೋಂಕು ತಗಲಿದೆ.
ಸ್ನೇಹಾಶಿಶ್ ಅವರ ವರದಿ ನೆಗೆಟಿವ್ ಬಂದಿದ್ದು, ಆದರೂ ಕೂಡ ಅವರಿಗೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ಸೌರವ್ ಗಂಗೂಲಿ ಮತ್ತವರ ಸಹೋದರ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಹೀಗಾಗಿ ಸೌರವ್ ಕುಟುಂಬಕ್ಕೆ ಸೋಂಕು ತಗುಲುವ ಯಾವುದೇ ಆತಂಕವಿಲ್ಲ.