alex Certify ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ

ಸೌತಾಂಪ್ಟನ್: ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ನಡೆಯದೇ ಎರಡನೇ ದಿನ ಆರಂಭವಾಗಿದೆ. ಭಾರತ 146 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಜೇಯ 44 ರನ್ ಮತ್ತು ಅಜಿಂಕ್ಯಾ ರೆಹಾನೆ ಅಜೇಯ 29 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಧೋನಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ವಿರಾಟ್ ಕೊಹ್ಲಿ 61 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ದಾಖಲೆ ಬರೆದಿದ್ದಾರೆ. ವಿಶ್ವಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ನಾಯಕನಾದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಪಂದ್ಯದಲ್ಲಿ ಅಜೇಯ 44 ರನ್ ಗಳಿಸಿರುವ ಅವರು ವೇಗವಾಗಿ 7500 ರನ್ ಗಳಿಸಿದವರ ಸಾಲಿಗೆ ಸೇರಿದ್ದಾರೆ. ಗವಾಸ್ಕರ್ ವೇಗವಾಗಿ 154 ಇನಿಂಗ್ಸ್ ಗಳಲ್ಲಿ 7500 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಈ ದಾಖಲೆ ಸರಿಗಟ್ಟಿದ್ದಾರೆ. ವೇಗವಾಗಿ 7500 ರನ್ ಕಲೆಹಾಕಿದ ವಿಶ್ವದ 9 ನೇ ಆಟಗಾರನಾಗಿದ್ದಾರೆ.

ಇನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಪುಡಿಗಟ್ಟಲು ವಿರಾಟ್ ಕೊಹ್ಲಿಗೆ 66 ರನ್ ಅಗತ್ಯವಿದೆ. ಈಗಾಗಲೇ ಪಂದ್ಯದಲ್ಲಿ ಅಜೇಯ 44 ರನ್ ಗಳಿಸಿರುವ ಅವರು ಇನ್ನು 66 ರನ್ ಗಳಿಸಿದರೆ ಶತಕದ ಸಂಭ್ರಮ ಆಚರಣೆ ನಡೆಯಲಿದೆ. ನಾಯಕನಾಗಿ ರಿಕಿ ಪಾಂಟಿಂಗ್ 41 ಶತಕ ದಾಖಲೆ ಸರಿಗಟ್ಟಿರುವ ಕೊಹ್ಲಿ ಅದನ್ನು ಹಿಂದಿಕ್ಕಿ ಹೊಸ ದಾಖಲೆ ಬರೆಯಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...