ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಸೋಲಿನ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡ ಬೆನ್ನಲ್ಲೇ ಹರ್ಭಜನ್ ಸಿಂಗ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.
ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 66 ರನ್ಗಳಿಂದ ಸೋಲನ್ನಪ್ಪಿದ್ದ ಟೀಂ ಇಂಡಿಯಾ, ಸಿಡ್ನಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಮತ್ತೊಂದು ಸೋಲನ್ನ ಕಂಡಿದೆ.
390 ರನ್ಗಳ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ಕೊಹ್ಲಿ ಪಡೆ ವಿಫಲರಾದ ಹಿನ್ನೆಲೆ ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾದ ಎರಡೆರಡು ಸೋಲಿನ ಬಳಿಕ ಅನೇಕ ಕ್ರಿಕೆಟ್ ತಜ್ಞರು ವಿರಾಟ್ ಕೊಹ್ಲಿಗೆ ನಾಯಕತ್ವದ ಭಾರ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೊಹ್ಲಿ ವಿರುದ್ಧದ ಈ ಟೀಕೆಗೆ ಉತ್ತರಿಸಿರುವ ಹರ್ಭಜನ್ ಸಿಂಗ್ ಕೇವಲ ನಾಯಕನಿಂದ ಮಾತ್ರ ಪಂದ್ಯದ ಸೋಲು ಗೆಲುವು ನಿರ್ಣಯವಾಗೋದಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ ನಾಯಕತ್ವದ ಒತ್ತಡದಲ್ಲಿದ್ದಾರೆ ಎಂದು ನನಗನಿಸೋದಿಲ್ಲ. ಕೊಹ್ಲಿ ಸವಾಲುಗಳನ್ನ ಎದುರಿಸೋಕೆ ಶಕ್ತರಾಗಿದ್ದಾರೆ. ನಾಯಕನಾಗಿ ತಂಡವನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಒಬ್ಬ ವ್ಯಕ್ತಿಯಿಂದ ತಂಡದ ಗೆಲುವು ಸೋಲುಗಳನ್ನ ನಿರ್ಣಯಿಸೋಕೆ ಆಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.