ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮಾಜಿ ನಾಯಕ ಧೋನಿ ಮಾಡಿದ ಕೆಲಸ ಅಚ್ಚಳಿಯದೆ ಉಳಿಯುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿದ ಕೊಹ್ಲಿ, ಧೋನಿ ಕೆಲಸವನ್ನು ಹೊಗಳಿದ್ದಾರೆ. ಹಾಗೆ ಧೋನಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲವೆಂದಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗನ ಕ್ರಿಕೆಟ್ ಪಯಣ ಒಮ್ಮೆ ಕೊನೆಗೊಳ್ಳುತ್ತದೆ. ಆದ್ರೆ ನಮಗೆ ಹತ್ತಿರವಾದವರು ಈ ನಿರ್ಧಾರ ಕೈಗೊಂಡಾಗ ಹೆಚ್ಚು ಭಾವುಕರಾಗುತ್ತೇವೆಂದು ಕೊಹ್ಲಿ ಹೇಳಿದ್ದಾರೆ.