alex Certify ಕೊಹ್ಲಿ ಫಿಟ್ನೆಸ್ ನೋಡಿ ಚಿಂತೆಗೊಳಗಾಗಿದ್ದಾರೆ ತಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ಫಿಟ್ನೆಸ್ ನೋಡಿ ಚಿಂತೆಗೊಳಗಾಗಿದ್ದಾರೆ ತಾಯಿ…!

कोहली की फिटनेस देख उनकी मां को होती हैं चिंता, बेटे को मानती हैं कमजोर

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ ವಿಷ್ಯಕ್ಕೆ ವಿಶ್ವದಾದ್ಯಂತದ ಪ್ರಸಿದ್ಧಿ ಪಡೆದಿದ್ದಾರೆ.  ಅಭಿಮಾನಿಗಳಿಗೆ ಕೊಹ್ಲಿ  ಫಿಟ್ನೆಸ್ ಐಕಾನ್. ಕೊಹ್ಲಿ, ಫಿಟ್ನೆಸ್ ವಿಷ್ಯದಲ್ಲಿ ಕಟ್ಟುನಿಟ್ಟಾಗಿದ್ದಾರೆ.  ಅವರು ಯಾವುದೇ ಸಂದರ್ಭದಲ್ಲೂ ತಮ್ಮ ಆಹಾರ ಮತ್ತು ಜೀವನಕ್ರಮವನ್ನು ನಿರ್ಲಕ್ಷಿಸುವುದಿಲ್ಲ.

ಲಾಕ್‌ಡೌನ್ ಸಮಯದಲ್ಲಿ ಸಹ, ಕೊಹ್ಲಿ ಮನೆಯಲ್ಲಿರುವ ಜಿಮ್‌ನಲ್ಲಿ ತಾಲೀಮು ಮಾಡುತ್ತಿದ್ದರು. ಆದರೆ ಜಗತ್ತಿಗೆ ಫಿಟ್ನೆಸ್ ಮಂತ್ರ ಹೇಳ್ತಿರುವ ಕೊಹ್ಲಿ ಬಗ್ಗೆ ಕೊಹ್ಲಿ ತಾಯಿ ಅಭಿಪ್ರಾಯವೇ ಬೇರೆ. ತಾಯಿ, ತನ್ನ ಮಗ ದುರ್ಬಲನಾಗುತ್ತಿದ್ದಾನೆ ಎಂದು ಭಾವಿಸಿದ್ದಾರೆ.

ವಿರಾಟ್ ಕೊಹ್ಲಿ, ಓಪನ್ ನೆಟ್ಸ್ ವಿತ್ ಮಯಾಂಕ್ ಕಾರ್ಯಕ್ರಮದಲ್ಲಿ ಮಯಾಂಕ್ ಅಗರ್ವಾಲ್ ಜೊತೆ ಮಾತನಾಡಿದ್ದರು. ಈ ವೇಳೆ ಮಯಾಂಕ್ ಅಗರ್ವಾಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ತಾಯಿ ವಿಷ್ಯವನ್ನು ಹೇಳಿದ್ದಾರೆ.

ನಾನು ದುರ್ಬಲವಾಗುತ್ತಿದ್ದೇನೆಂದು ನನ್ನ ತಾಯಿ ಹೇಳುತ್ತಿದ್ದರು. ಇದು ಯಾವುದೇ ತಾಯಿ ಹೇಳುವ ಸಾಮಾನ್ಯ ವಿಷಯವಾಗಿದೆ. ದುಂಡುಮುಖಿಯಾಗದಿದ್ದರೆ, ಅವನಿಗೆ ಸಮಸ್ಯೆ ಇದೆ ಅಥವಾ ಅನಾರೋಗ್ಯವಿದೆ ಎಂದು ಅರ್ಥ. ಮಗ ದುಂಡಗಿದ್ದರೆ ಮಾತ್ರ ಆರೋಗ್ಯವಾಗಿದ್ದಾನೆಂದು ತಾಯಂದಿರು ಭಾವಿಸ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಎರಡು ದಿನಕ್ಕೊಮ್ಮೆ ತಾಯಿ ಈ ಪ್ರಶ್ನೆ ಕೇಳ್ತಾರೆ. ಅವ್ರಿಗೆ ಇದರ ಬಗ್ಗೆ ಉತ್ತರ ನೀಡಲು ಕೆಲವೊಮ್ಮೆ ಕಷ್ಟವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...