ಭಾರತದ ಆಸ್ಟ್ರೇಲಿಯಾ ಪ್ರವಾಸ ಎರಡು ಕಾರಣಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ. ಈ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್‌ಗಳಿಗೆ ಆಲ್ ಔಟ್ ಆಗಿದ್ದು ಮೊದಲನೇ ಕಾರಣ. ಸೋಲಿನ ನಂತರ ಉತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಜಯ ದಾಖಲಿಸಿತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಜನವರಿ 20ವರೆಗೆ ನಡೆದಿದೆ. ಡಿಸೆಂಬರ್ 19 ಟೀಂ ಇಂಡಿಯಾ ಕೆಟ್ಟ ಪ್ರದರ್ಶನ ನೀಡಿತ್ತು. ಅಡಿಲೇಡ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 36 ರನ್‌ಗಳಿಗೆ ವಿಕೆಟ್ ಒಪ್ಪಿಸಿತ್ತು. ಆಸ್ಟ್ರೇಲಿಯಾ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಟೀಂ ಇಂಡಿಯಾ ಆಟಗಾರರು ಹಾಗೂ ಅಭಿಮಾನಿಗಳಿಗೆ ಇದನ್ನು ಸಹಿಸಲು ಸಾಧ್ಯವಿರಲಿಲ್ಲ. ಪರಿಣಾಮವಾಗಿ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಆ ರಾತ್ರಿ ಸರಿಯಾಗಿ ನಿದ್ರೆ ಮಾಡಿರಲಿಲ್ಲ.
ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ, ಫೀಲ್ಡಿಂಗ್ ಕೋಚ್ ಆರ್.ಕೆ. ಶ್ರೀಧರ್ ಜೊತೆ ಅಡಿಲೇಡ್ ಟೆಸ್ಟ್ ಸೋಲು ಮತ್ತು ನಂತರ ಭಾರತೀಯ ಪ್ರತಿದಾಳಿಯ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಪಂದ್ಯ ಗೆಲ್ಲುವುದು ತಂಡಕ್ಕೆ ಬಹಳ ಮುಖ್ಯವಾಗಿತ್ತು. ಇದಕ್ಕಾಗಿ ಮಧ್ಯರಾತ್ರಿ ಸಭೆ ನಡೆದಿತ್ತಂತೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ಅಜಿಂಕ್ಯ ರಹಾನೆ ಪ್ಲಾನ್ ಮಾಡಿದ್ದರಂತೆ. ಇದಕ್ಕೆ ರವಿಶಾಸ್ತ್ರಿ ಸಹಾಯ ಮಾಡಿದ್ದರೆಂದು ಶ್ರೀಧರ್ ಹೇಳಿದ್ದಾರೆ. ಮಷಿನ್ ಮೆಲ್ಬೋರ್ನ್ ಕಾರ್ಯರೂಪಕ್ಕೆ ಬಂದು ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿತ್ತು.