ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ 13 ನೇ ಋತುವಿನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ನಡೆಯಲಿದೆ. ಆರ್ ಸಿ ಬಿಯನ್ನು ಚಾಂಪಿಯನ್ ಮಾಡುವ ಉತ್ಸಾಹದಲ್ಲಿ ಕೊಹ್ಲಿಯಿದ್ದಾರೆ.
ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಮೂರು ಬಾರಿ ಫೈನಲ್ ತಲುಪಿದೆ. ಆದರೆ ಇಲ್ಲಿಯವರೆಗೆ ಒಮ್ಮೆಯೂ ಚಾಂಪಿಯನ್ ಆಗಿ ಟ್ರೋಫಿ ಎತ್ತಿ ಹಿಡಿದಿಲ್ಲ.
ಕೊಹ್ಲಿ ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಸಹ ಆಟಗಾರರೊಂದಿಗೆ ಮಸ್ತಿ ಮೂಡ್ ನಲ್ಲಿರುವುದು ಕಂಡು ಬರ್ತಿದೆ. ನಿಷ್ಠೆ ಎಲ್ಲಕ್ಕಿಂತ ಹೆಚ್ಚಿನದು. ಮುಂದೆ ಬರುವ ದಿನಗಳನ್ನು ಕಾಯಲು ಆಗ್ತಿಲ್ಲವೆನ್ನುವ ಅರ್ಥದಲ್ಲಿ ಕೊಹ್ಲಿ ಶೀರ್ಷಿಕೆ ಹಾಕಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲೂ ಕೊಹ್ಲಿ ವರ್ಕ್ ಔಟ್ ಬಿಟ್ಟಿಲ್ಲ. ಕಠಿಣ ಅಭ್ಯಾಸದ ವಿಡಿಯೋಗಳನ್ನು ಕೊಹ್ಲಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.