ನವದೆಹಲಿ: ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಾಯೋಜಿತ ಪೋಸ್ಟ್ ಶೇರ್ ಮಾಡಲು ಪ್ರತಿ ಪೋಸ್ಟ್ ಗೆ 11.4 ಕೋಟಿ ರೂ. ಗಳಿಸುವ ವರದಿಯನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಲ್ಲಗಳೆದಿದ್ದಾರೆ.
ಹಾಫ್ಟರ್ ಟೂಲ್ 2023ರ ಇನ್ ಸ್ಟಾಗ್ರಾಂನಿಂದ ಗರಿಷ್ಠ ಹಣ ಗಳಿಸುವ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೊಹ್ಲಿ ಪ್ರತಿ ಪೋಸ್ಟ್ ಗೆ 11.4 ಕೋಟಿ ರೂ.ಗ ಳಿಸುತ್ತಿದ್ದಾರೆ ಎಂದು ಟ್ಯಾಗ್ ಮಾಡಿದ ವರದಿಯನ್ನು ವಿರಾಟ್ ಕೊಹ್ಲಿ ಸುಳ್ಳು ಎಂದು ತಿಳಿಸಿದ್ದಾರೆ.
ನಾನು ಜೀವನದಲ್ಲಿ ಇದುವರೆಗೆ ಪಡೆದಿರುವುದರ ಬಗೆಗೆ ನನಗೆ ಹೆಮ್ಮೆ ಇದೆ. ಆದರೆ, ಜಾಲತಾಣಗಳಿಂದ ಗಳಿಕೆ ಕುರಿತಾಗಿ ಪ್ರಕಟವಾದ ವರದಿ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.
ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಪ್ರತಿ ಪೋಸ್ಟ್ ಗೆ 26 ಕೋಟಿ ರೂ., ಲಿಯೊನೆಲ್ ಮೆಸ್ಸಿ ಪೋಸ್ಟ್ ಗೆ 21 ಕೋಟಿ ರೂ. ಗಳಿಸುತ್ತಾರೆ ಎಂದು ಹೇಳಲಾಗಿತ್ತು.
ಇನ್ ಸ್ಟಾಗ್ರಾಂನಲ್ಲಿ ಬ್ರಾಂಡ್ ಗಳ ಪ್ರಚಾರಕ್ಕೆ ಮಾಡುವ ಪ್ರತಿ ಪೋಸ್ಟ್ ಗೆ 11.45 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂಬುದನ್ನು ನಿರಾಕರಿಸಿದ ವಿರಾಟ್ ಕೊಹ್ಲಿ ಅವರು, ನಾನು ಜೀವನದಲ್ಲಿ ಸಂಪಾದಿಸುವ ಪ್ರತಿಯೊಂದಕ್ಕೂ ಋಣಿಯಾಗಿದ್ದೇನೆ. ಆದರೆ, ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳಿಂದ ಹಣ ಗಳಿಕೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲವೆಂದು ಅವರು ತಿಳಿಸಿದ್ದಾರೆ.