
ಆದರೆ ಈಗ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟೇಟರ್ ಸುನೀಲ್ ಗಾವಸ್ಕರ್ ಸ್ಪೋರ್ಟ್ಸ್ಸ್ಟಾರ್ನಲ್ಲಿ ಅಂಕಣ ಬರೆಯುವ ಮೂಲಕ ಈ ವಿಚಾರವನ್ನ ಇನ್ನೊಮ್ಮೆ ಕೆದಕಿದ್ದಾರೆ.
ಟೀಂ ಇಂಡಿಯಾದಲ್ಲಿ ಇಬ್ಬಗೆಯ ನೀತಿಯನ್ನ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ಸುನಿಲ್ ಗವಾಸ್ಕಾರ್, ಆರ್. ಅಶ್ವಿನ್ ಒಳ್ಳೆಯ ಬೌಲರ್ ಎಂಬ ವಿಚಾರ ತಿಳಿದಿದ್ದರೂ ಸಹ ಅವರು ಒಂದು ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ನೀಡಿಲ್ಲ ಅಂದರೆ ಅವರನ್ನ ತಂಡದಿಂದ ಹೊರಗಿಡಲಾಗುತ್ತೆ. ಆದರೆ ತಂಡದ ಕೆಲ ಬ್ಯಾಟ್ಸಮನ್ಗಳಿಗೆ ಈ ನಿಯಮ ಅನುಕರಣೆ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.
ಮಾತ್ರವಲ್ಲದೇ ಟಿ 20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊಸ ಬೌಲರ್ ಟಿ. ನಟರಾಜನ್ ತಂದೆಯಾದ ಸಂದರ್ಭದಲ್ಲಿ ಅವರಿಗೆ ರಜೆ ನೀಡಲಾಗಿಲ್ಲ. ಅದರ ಬದಲು ನಟರಾಜನ್ಗೆ ತಂಡದಲ್ಲೇ ಉಳಿದುಕೊಳ್ಳುವಂತೆ ಹೇಳಲಾಯ್ತು. ಆದರೆ ವಿರಾಟ್ ಕೊಹ್ಲಿ ಮಗು ಜನಿಸುವ ಮೊದಲೇ ರಜೆ ತೆಗೆದುಕೊಂಡು ಹೋಗಿದ್ದಾರೆ ಅಂತಾ ಅಂಕಣದಲ್ಲಿ ಕಿಡಿಕಾರಿದ್ದಾರೆ.
ಆದರೆ ಸುನಿಲ್ ಗವಾಸ್ಕರ್ರ ಈ ಅಭಿಪ್ರಾಯ ಕೊಹ್ಲಿ ಅಭಿಮಾನಿಗಳು ಕೆಣಕಿದೆ. ಟ್ವಿಟರ್ನಲ್ಲಿ ಸಾಕಷ್ಟು ಅಭಿಮಾನಿಗಳು ಗವಾಸ್ಕಾರ್ ವಿರುದ್ಧ ಕಿಡಿಕಾರಿದ್ದಾರೆ. ನಟರಾಜನ್ ಬಗ್ಗೆ ಗವಾಸ್ಕಾರ್ಗೆ ಕಾಳಜಿಯಿಲ್ಲ ಬದಲಾಗಿ ಕೊಹ್ಲಿ ವಿರುದ್ಧ ಕತ್ತಿ ಮಸೆಯಲು ಅವರನ್ನ ಬಳಸಿಕೊಂಡಿದ್ದಾರೆ ಅಂತಾ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಹಲವರು ಕೊಹ್ಲಿಗೆ ಕ್ರಿಕೆಟ್ ಅವರ ವೃತ್ತಿ. ಹೊರತು ಜೀವನವಲ್ಲ. ಹೀಗಾಗಿ ಅವರು ರಜೆ ತೆಗೆದುಕೊಂಡ್ರೆ ತಪ್ಪೇನಿದೆ ಅಂತಾ ಪ್ರಶ್ನಿಸಿದ್ದಾರೆ.
https://twitter.com/perfect_indian/status/1341951540513292292