
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ತಮ್ಮ ಕೆಲಸದಿಂದ ಕೊಹ್ಲಿ ಲಕ್ಷಾಂತರ ಮಂದಿ ಮನಸ್ಸು ಕದ್ದಿದ್ದಾರೆ.
ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿರುವ ಕೊಹ್ಲಿ, ಕೊರೊನಾ ಪೀಡಿತರಿಗೆ ನೆರವಾಗಿದ್ದಾರೆ. ಈಗ ಮಾಜಿ ಮಹಿಳಾ ಕ್ರಿಕೆಟರ್ ತಾಯಿ ಜೀವ ಉಳಿಸಲು ವಿರಾಟ್ ನೆರವಾಗಿದ್ದಾರೆ. ವಿರಾಟ್ ಕೊಹ್ಲಿ ಮಾಜಿ ಕ್ರಿಕೆಟರ್ ಕೆ.ಎಸ್. ಶ್ರಾವಂತಿ ನಾಯ್ಡು ತಾಯಿಗೆ ಚಿಕಿತ್ಸೆ ನೀಡಲು ಹಣ ಸಹಾಯ ಮಾಡಿದ್ದಾರೆ. ಶ್ರಾವಂತಿ ತಾಯಿ ಎಸ್.ಕೆ. ಸುಮನ್ ಅವರಿಗೆ ಕೊರೊನಾ ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ಈ ಪರಿಸ್ಥಿತಿಯಲ್ಲಿ ಹಣದ ಕೊರತೆ ಎದುರಿಸುತ್ತಿರುವ ನಾಯ್ಡುಗೆ ಕೊಹ್ಲಿ ನೆರವು ನೀಡಿದ್ದಾರೆ.
ಲಸಿಕೆ ಹಾಕಿಸಿಕೊಂಡ ಫೋಟೋ ಅಪ್ಲೋಡ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಕ್ರಿಕೆಟಿಗ
ಕೆ.ಎಸ್. ಶ್ರಾವಂತಿ ನಾಯ್ಡು, ತಾಯಿ ಚಿಕಿತ್ಸೆಗಾಗಿ ಸುಮಾರು 16 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ತಾಯಿಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಬಿಸಿಸಿಐ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಸಹಾಯವನ್ನು ಕೋರಿದರು. ಇದಾದ ನಂತ್ರ ಕೊಹ್ಲಿ, ಶ್ರಾವಂತಿ ಕುಟುಂಬಕ್ಕೆ 6.77 ಲಕ್ಷ ರೂಪಾಯಿ ನೀಡಿದ್ದಾರೆ.