ಕೊಲ್ಕೊತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಭಾರತ ಪರ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ.
ಇಂದು 35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ 49ನೇ ಶತಕ ಪೂರ್ಣಗೊಳಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 49ನೇ ಶತಕ ಗಳಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ರೋಹಿತ್ ಶರ್ಮಾ 40, ಶುಭ ಮನ್ ಗಿಲ್ 23, ವಿರಾಟ್ ಕೊಹ್ಲಿ ಅಜೇಯ 100, ಶ್ರೇಯಸ್ ಅಯ್ಯರ್ 77, ಕೆ.ಎಲ್. ರಾಹುಲ್ 8, ಸೂರ್ಯ ಕುಮಾರ್ ಯಾದವ್ 22, ರವೀಂದ್ರ ಜಡೇಜ ಅಜೇಯ 20 ರನ್ ಗಳಿಸಿದ್ದಾರೆ. ಆಟ ಮುಂದುವರೆದಿದೆ.