ಅಬುದಾಭಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಮೊದಲ ಐಪಿಎಲ್ ಪಂದ್ಯದಿಂದಲೂ ಆಡುತ್ತಿರುವ ವಿರಾಟ್ ಕೊಹ್ಲಿ ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಐಪಿಎಲ್ 14 ನೇ ಆವೃತ್ತಿಯ ಭಾಗ 2 ರಲ್ಲಿ ಮೊದಲ ಪಂದ್ಯದಲ್ಲೇ ಅವರು ದಾಖಲೆ ಬರೆದಿದ್ದಾರೆ.
2008 ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿರುವ ಅವರು ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಟಾಪರ್ ಆಗಿದ್ದು, 5 ಶತಕ, 40 ಅರ್ಧ ಶತಕ ಬಾರಿಸಿದ್ದಾರೆ.
ಎಂಎಸ್ ಧೋನಿ 182 ಪಂದ್ಯ, ಸುರೇಶ್ ರೈನಾ 172, ಕೀರನ್ ಪೊಲಾರ್ಡ್ 172, ರೋಹಿತ್ ಶರ್ಮಾ 162 ಪಂದ್ಯಗಳನ್ನು ಒಂದೇ ತಂಡದ ಪರವಾಗಿ ಆಡಿದ್ದಾರೆ.
ಅತಿ ಹೆಚ್ಚು ಪಂದ್ಯಗಳನ್ನಾಡಿದವರಲ್ಲಿ ಎಂಎಸ್ ಧೋನಿ 212, ರೋಹಿತ್ ಶರ್ಮ 207, ದಿನೇಶ್ ಕಾರ್ತಿಕ್ 204, ಸುರೇಶ್ ರೈನಾ 201 ಹಾಗೂ ವಿರಾಟ್ ಕೊಹ್ಲಿ 200 ಪಂದ್ಯಗಳನ್ನಾಡಿದ್ದಾರೆ. ಈ ಟೂರ್ನಿ ಬಳಿಕ ಅವರು ಆರ್.ಸಿ.ಬಿ. ನಾಯಕತ್ವ ತೊರೆಯಲಿದ್ದು, ನಾಯಕನಾಗಿ ಮುಂದುವರೆಯಲಿದ್ದಾರೆ.