ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.
ಬೇಬಿ ವಿಲೇಜ್ ಎಂಬ ಮಳಿಗೆಗೆ ಭೇಟಿ ಕೊಟ್ಟಿದ್ದ ಇಬ್ಬರೂ ಕ್ರಿಕೆಟಿಗರು, ಮಳಿಗೆಯ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೋವನ್ನು ಬೇಬಿ ವಿಲೇಜ್ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಕ್ಕಳಿಗೆ ಬೇಕಾದ ಪರಿಕರಗಳನ್ನು ಕೊಂಡುಕೊಳ್ಳಲು ಹೋಗಿದ್ದ ಇಬ್ಬರೂ ಕ್ರಿಕೆಟಿಗರು, ಮಾಸ್ಕ್ ತೆಗೆದುಕೊಂಡು ಹೋಗಿರಲಿಲ್ಲ. ಮಳಿಗೆಯಲ್ಲಿ ವ್ಯಾಪಾರ ವಹಿವಾಟನ್ನೂ ಹಾಗೆಯೇ ನಡೆಸಿದ್ದಾರೆ ಎನ್ನಲಾಗಿದೆ.
ಕೋವಿಡ್ ಶಿಷ್ಟಾಚಾರ ಉಲ್ಲಂಘನೆ ಇದೇ ಮೊದಲಲ್ಲ. ರೋಹಿತ್ ಶರ್ಮ, ರಿಷಭ್ ಪಂತ್, ನವ್ ದೀಪ್ ಸೈನಿ, ಪೃಥ್ವಿ ಶಾ, ಶುಬ್ಮಾನ್ ಗಿಲ್ ಸಹ ಮೆಲ್ಬೋರ್ನ್ ನಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದರು.