ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ದಿಲ್ಲಿಯ ಚೋಲೆ ಭತೂರೆ ಭಾರೀ ಇಷ್ಟ ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೊತ್ತಾಗಿದೆ.
ಐಪಿಎಲ್ ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ನಲ್ಲಿ ಆಡುತ್ತಿರುವ ಕೊಹ್ಲಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಸಂಭಾಷಣೆಗಾಗಿ ಸಂವಾದಕ್ಕೆ ಆಹ್ವಾನಿಸಿದರು.
ಕೊಹ್ಲಿ ಆಗಾಗ್ಗೆ ತಮ್ಮ ಫಿಟ್ ನೆಸ್, ಜಿಮ್ ವರ್ಕ್ ಔಟ್, ದೇಸಿ ಡಯಟ್ ಪ್ಲಾನ್ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಈ ಹಿನ್ನೆಲೆಯಲ್ಲಿ ಫಿಟ್ ಇಂಡಿಯಾ ಪರವಾಗಿ ಮಾತನಾಡಿಸಿದ ಪಿಎಂ ಮೋದಿ, ದಿಲ್ಲಿಯ ಚೋಲೆ ಭತೂರೆ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರಬೇಕಲ್ಲವೇ ? ಫಿಟ್ ನೆಸ್, ಡಯಟ್ ಗಾಗಿ ಇತ್ತೀಚೆಗೆ ಚೋಲೆ ಭತೂರೆ ತಿಂದಿಲ್ಲ ಎನಿಸುತ್ತದೆ ಅಲ್ಲವೇ ಎಂದು ಚಟಾಕಿ ಹಾರಿಸಿದರು.
https://twitter.com/Viratian18fan/status/1309045898949914624?ref_src=twsrc%5Etfw%7Ctwcamp%5Etweetembed%7Ctwterm%5E1309045898949914624%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fvirat-kohli-and-chole-bhature-are-match-made-in-heaven-and-his-interaction-with-pm-modi-is-proof-2904807.html
https://www.instagram.com/p/B7GmpCPlIB5/?utm_source=ig_embed