ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಇತಿಹಾಸ ರಚಿಸಿದೆ. ಭಾರತೀಯ ಪುರುಷರ ಹಾಕಿ ತಂಡವು 49 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಭಾರತದ ಪುರುಷರ ಹಾಕಿ ತಂಡ, ಟೋಕಿಯೊ ಒಲಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಗ್ರೇಟ್ ಬ್ರಿಟನ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಹಾಕಿ ತಂಡದ ಈ ಸಾಧನೆ ಭಾರತೀಯರನ್ನು ಕುಣಿದು, ಕುಪ್ಪಳಿಸುವಂತೆ ಮಾಡಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ ಮಾಜಿ ಹಾಕಿ ಆಟಗಾರರು ಅಳುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೈರಲ್ ವೀಡಿಯೋದಲ್ಲಿ, ಸುನೀಲ್ ತನೇಜಾ ಮತ್ತು ಸಿದ್ಧಾರ್ಥ್ ಪಾಂಡೆ ಕಾಣಿಸಿಕೊಂಡಿದ್ದಾರೆ.
BIG NEWS: ಪೊಲೀಸ್ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು; ಪೊಲೀಸ್ ಠಾಣೆ ಮುಂದೆ ಧರಣಿ; ಆಫ್ರಿಕನ್ ಪ್ರಜೆಗಳ ಆಕ್ರೋಶ
ಈ ಇಬ್ಬರು ಮಾಜಿ ಆಟಗಾರರು, ಬ್ರಿಟನ್-ಭಾರತದ ನಡುವೆ ನಡೆಯುತ್ತಿದ್ದ ಕ್ವಾರ್ಟರ್ ಫೈನಲ್ ಪಂದ್ಯದ ಹಿಂದಿ ಕಾಮೆಂಟ್ರಿ ನೀಡ್ತಿದ್ದರು. ಗ್ರೇಟ್ ಬ್ರಿಟನ್ ವಿರುದ್ಧ ಭಾರತ ಗೆಲುವು ಸಾಧಿಸ್ತಿದ್ದಂತೆ ಈ ಇಬ್ಬರು ಕಾಮೆಂಟೇಟರ್ ಭಾವುಕರಾಗಿದ್ದಾರೆ. ಗೆಲುವು ಸಾಧಿಸ್ತಿದ್ದಂತೆ ಭಾವುಕರಾಗಿ ಇಬ್ಬರ ಕಣ್ಣಲ್ಲೂ ನೀರು ಬಂದಿತ್ತು. ನಂತ್ರ ಸಂಭಾಳಿಸಿಕೊಂಡು ಅಳುತ್ತಲೇ ಗೆಲುವಿನ ಪರಿ ವಿವರಿಸಿದ್ರು. ಆಗಸ್ಟ್ 3ರಂದು ಭಾರತ ತಂಡ, ಬೆಲ್ಜಿಯಂ ವಿರುದ್ಧ ಸೆಮಿಫೈನಲ್ ಪಂದ್ಯವನ್ನಾಡಲಿದೆ.
https://www.youtube.com/watch?v=NefiKs_2Qrc