ಒಲಿಂಪಿಕ್ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಮೊದಲ ಬಾರಿಗೆ ತನ್ನ ಮುದ್ದಾದ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
ಪತ್ನಿ ಕಾಸಿ ಬೆನ್ನೆತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಾಯಿ – ಮಗುವಿನ ಫೋಟೋ ಹಾಕಿ, ಶುಭಾಶಯ ಕೋರಿದ್ದು, ನಿನ್ನ ವಿಶೇಷ ದಿನದಂದು ನಿನ್ನ ಜೊತೆಯಲ್ಲಿ ನಾನಿದ್ದೇನೆ, ನಿನ್ನೊಂದಿಗೆ ಕಾಲ ಕಳೆಯುತ್ತಿದ್ದೇನೆ ಎಂಬುದೇ ಖುಷಿಯ ವಿಚಾರ.
ನಿನ್ನನ್ನು ಸಂತೋಷವಾಗಿ ಇಡುವುದು ಮತ್ತು ನಿನ್ನ ಮುಖದ ಮೇಲೆ ನಗು ತರಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಇದಕ್ಕಿಂತ ನನಗಿನ್ನೇನೂ ಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ.
ಉತ್ತರಾರ್ಧದಲ್ಲಿ ಮಗಳ ಬಗ್ಗೆ ಬರೆದಿದ್ದು, ಇವಳ ಹೆಸರು ಒಲಂಪಿಯಾ ಲೈಟ್ನಿಂಗ್ ಬೋಲ್ಟ್. ಮಗಳು ಒಲಂಪಿಯಾಳ ಜೊತೆಗೆ ನಾವಿಬ್ಬರೂ ಹೊಸ ಅಧ್ಯಾಯ ಶುರು ಮಾಡಿದ್ದೇವೆ. ಮುಂದಿನ ಜೀವನನ್ನ ಏನನ್ನು ತಂದುಕೊಡುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇನೆ. ನಮಗಾಗಿ, ಕುಟುಂಬಕ್ಕಾಗಿ ಸದಾ ನಾನಿರುತ್ತೇನೆ ಎಂದಿದ್ದಾರೆ.
https://www.instagram.com/p/CCWNMuxFp6d/?utm_source=ig_embed
https://twitter.com/leahflame/status/1280595640188203008?ref_src=twsrc%5Etfw%7Ctwcamp%5Etweetembed%7Ctwterm%5E1280595640188203008%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fusain-bolt-shares-first-adorable-photos-of-his-daughter-reveals-her-name-see-now-netizens-reacted%2F618224