
ನವದೆಹಲಿ: ರಾಜ್ ಕೋಟ್ ಮತ್ತು ಸೂರತ್ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
27 ವರ್ಷದ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಮತ್ತು 31 ವರ್ಷದ ಜಿಗ್ನೇಶ್ ಚೌಹಾಣ್ ಎಂಬ ಇಬ್ಬರು ಯುವಕರು ಮೃತಪಟ್ಟವರು.
ಸೂರತ್‌ನಲ್ಲಿ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಅವರು ಶನಿವಾರ ಕ್ರಿಕೆಟ್ ಆಟವಾಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ರಾಜ್‌ಕೋಟ್ ನಲ್ಲಿ ಜಿಗ್ನೇಶ್ ಚೌಹಾಣ್ ಭಾನುವಾರ ರೇಸ್ ಕೋರ್ಸ್‌ನ ಮಾಧವರಾವ್ ಸಿಂದಿಯಾ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹಠಾತ್ ಕುಸಿದು ಬಿದ್ದಿದ್ದಾರೆ. ಇಂಟರ್‌ಪ್ರೆಸ್ ಮೀಡಿಯಾ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ಅವರು ಆಟವಾಡಿದ ನಂತರ ತೀವ್ರ ಎದೆ ನೋವು ಮತ್ತು ತಲೆತಿರುಗುತ್ತಿದೆ ಎಂದು ಹೇಳಿದ್ದು, ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ನಿಧನರಾದರು ಎಂದು ಹೇಳಲಾಗಿದೆ.