ಕೊಲ್ಕತ್ತಾ: ತ್ರಿಪುರಾ ರಾಜ್ಯದ 19 ವರ್ಷದ ಒಳಗಿನವರ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯ ಅಯಾಂತಿ ರಿಯಾಂಗ್(16) ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಅವರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಉದಯಪುರ ಉಪವಲಯ ತೈನಾನಿಯ ಅಯಾಂತಿ ಅವರು ರಿಯಾಂಗ್ ಆದಿವಾಸಿ ಕುಟುಂಬದವರಾಗಿದ್ದಾರೆ. 23 ವರ್ಷದೊಳಗಿನವರ ತ್ರಿಪುರಾ ರಾಜ್ಯದ ತಂಡವನ್ನು ಕೂಡ ಅವರು ಪ್ರತಿನಿಧಿಸಿದ್ದರು.
ಈ ಕುರಿತು ಮಾತನಾಡಿದ ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ತಿಮಿರ್ ಚಂದ್ ಪ್ರತಿಭಾನ್ವಿತ ಆಟಗಾರ್ತಿಯಾಗಿದ್ದ ಅಯಾಂತಿ ರಿಯಾಂಗ್ ಕ್ರಿಕೆಟ್ ನಲ್ಲಿ ಇನ್ನೂ ಬೆಳೆಯುವ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಹೇಳಿದ್ದಾರೆ.