ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಶೂಟರ್ ಮನೀಶ್ ನರ್ವಾಲ್ ಮತ್ತು ಸಿಂಗರಾಜ್ ಅಧಾನ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.
19 ವರ್ಷದ ಮನೀಶ್ ಪ್ಯಾರಾಲಿಂಪಿಕ್ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅವರು 218.2 ಪಾಯಿಂಟ್‌ಗಳನ್ನು ಸಂಗ್ರಹಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸಿಂಗರಾಜ್ 216.7 ಪಾಯಿಂಟ್‌ಗಳೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಎರಡನೇ ಪದಕವನ್ನು ಪಡೆದರು. ರಷ್ಯಾದ ಸೆರ್ಗೆ ಮಾಲಿಶೇವ್ ಕಂಚಿನ ಪದಕ ಗೆದ್ದರು.
ಸಿಂಗರಾಜ್ ಅವರು ಫೈನಲ್‌ನಲ್ಲಿ ಇಬ್ಬರು ಭಾರತೀಯರಿಗಿಂತ ಉತ್ತಮವಾಗಿ ಆರಂಭ ಕಂಡರು. ಮೊದಲ 10 ಶಾಟ್‌ಗಳ ನಂತರ 92.1 ಪಾಯಿಂಟ್‌ಗಳನ್ನು ಸಂಗ್ರಹಿಸಿ ಮುಂಚೂಣಿಯಲ್ಲಿದ್ದರು. ಅರ್ಹತೆಯಲ್ಲಿ ಏಳನೇ ಸ್ಥಾನ ಪಡೆದ ಮನೀಶ್ ಮೊದಲ ಸ್ಪರ್ಧೆಯ ಹಂತದಲ್ಲಿ 87.2 ಅಂಕಗಳನ್ನು ಗಳಿಸಿದರು.
ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಶೂಟರ್ ಗಳಾದ ಮನೀಶ್ ನರ್ವಾಲ್ ಚಿನ್ನ ಮತ್ತು ಸಿಂಗರಾಜ್ ಅಧಾನ ಬೆಳ್ಳಿ ಗೆದ್ದಿದ್ದು, ಭಾರತ ಪದಕ ಬೇಟೆ ಮುಂದುವರೆದಿದೆ.