ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಜಪಾನ್ ರಾಜಧಾನಿ ಟೋಕಿಯೊದ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಹೈ ಜಂಪ್ ನಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗಳಿಸಿದ್ದಾರೆ.
ಭಾರತದ ಭಾವಿನಬೆನ್ ಪಟೇಲ್ ಅವರು ಭಾನುವಾರ ಟೇಬಲ್ ಟೆನಿಸ್ (ಟಿಟಿ) ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಮಹಿಳಾ ಸಿಂಗಲ್ಸ್ ಕ್ಲಾಸ್ 4 ಸ್ಪರ್ಧೆಯ ಫೈನಲ್ ನಲ್ಲಿ ಚೀನಾದ ಜೋ ಯಿಂಗ್ ವಿರುದ್ಧ ಸೋತ ನಂತರ ಭಾವಿನಾಬೆನ್ ಬೆಳ್ಳಿ ಪದಕ ಗೆದ್ದರು.
ನಿಶಾದ್ ಕುಮಾರ್ ಅವರು ಹೈಜಂಪ್ ನಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಭಾರತಕ್ಕೆ ಎರಡು ಬೆಳ್ಳಿ ಪದಕ ಬಂದಿದೆ.
ಟೋಕಿಯೊದಿಂದ ಸಂತೋಷದಾಯಕ ಸುದ್ದಿ ಬಂದಿದೆ. ಪುರುಷರ ಹೈ ಜಂಪ್ ಟಿ 47 ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಅವರು ಅತ್ಯುತ್ತಮ ಕ್ರೀಡಾಪಟು ಮತ್ತು ಅತ್ಯುತ್ತಮ ಕೌಶಲ್ಯ ಮತ್ತು ಸ್ಥಿರತೆಯನ್ನು ಹೊಂದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.