ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ವಿನೋದ್ ಕುಮಾರ್ ಅವರು ಡಿಸ್ಕಸ್ ಥ್ರೋನಲ್ಲಿ ಕಂಚಚಿನ ಪದಕ ಗಳಿಸಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ 3 ನೇ ಪದಕ ತಂದಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾವಿನಾ ಪಟೇಲ್ ಮತ್ತು ನಿಶಾದ್ ಕುಮಾರ್ ನಂತರ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದು, ಮೂರನೇ ಕ್ರೀಡಾಪಟುವಾಗಿ ವಿನೋದ್ ಕುಮಾರ್ ಮೂರನೇ ಸ್ಥಾನ ಪಡೆದರು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 5 ನೇ ದಿನದಲ್ಲಿ ಭಾರತದ ವಿನೋದ್ ಕುಮಾರ್ ಪುರುಷರ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದರಿಂದ ಅವರ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ಬರೆದಿದ್ದಾರೆ.
ವಿನೋದ್ ಕುಮಾರ್ 19.91 ಮೀಟರ್ ಎಸೆತದಲ್ಲಿ ಏಷ್ಯನ್ ದಾಖಲೆ ಮುರಿದು ಡಿಸ್ಕಸ್ ಥ್ರೋನಲ್ಲಿ ಕಂಚಿನ ಪದಕ ಗೆದ್ದರು. ಮೂರು ಪದಕಗಳೊಂದಿಗೆ, ಭಾರತವು ಪ್ಯಾರಾಲಿಂಪಿಕ್ಸ್ ನಲ್ಲಿ ತಮ್ಮ ಅತ್ಯುತ್ತಮ ಸಾಧನೆ ಮಾಡಿದೆ. 2016 ರ ರಿಯೋ ಗೇಮ್ಸ್ ನಲ್ಲಿ ಭಾರತ ನಾಲ್ಕು ಪದಕಗಳನ್ನು ಗೆದ್ದಿತ್ತು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಭಾರತದ ಮೂರನೇ ಪದಕವಾಗಿದ್ದು, ಈ ಮೂರೂ ರಾಷ್ಟ್ರೀಯ ಕ್ರೀಡಾದಿನವಾದ ಭಾನುವಾರ ಗೆದ್ದವು. ಇದಕ್ಕೂ ಮುನ್ನ ಭಾರತದ ಟೇಬಲ್ ಟೆನಿಸ್ ತಾರೆ ಭಾವಿನಾ ಪಟೇಲ್ ಪ್ಯಾರಾಲಿಂಪಿಕ್ಸ್ ನಲ್ಲಿ ದೇಶದ ಖಾತೆ ತೆರೆದು ಮಹಿಳಾ ಟೇಬಲ್ ಟೆನಿಸ್ ಫೈನಲ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಹೈ ಜಂಪರ್ ನಿಶಾದ್ ಕುಮಾರ್ ಕೂಡ ಅಂತಿಮ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.
ವಿನೋದ್, ಮಾಜಿ ಬಿಎಸ್ಎಫ್ ಯೋಧ. ದುರದೃಷ್ಟಕರ ಎಂದರೆ ಅಪಘಾತಕ್ಕೊಳಗಾಗಿ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಪಾರ್ಶ್ವವಾಯುವಿಗೆ ತುತ್ತಾಗಿ ಮತ್ತು ಹಾಸಿಗೆಯಲ್ಲಿ ಮಲಗಿದ್ದರು. ವಿನೋದ್ ಅಂತಿಮವಾಗಿ ಹಲವಾರು ಸವಾಲುಗಳನ್ನು ಜಯಿಸಿ, ರಿಯೊ 2016 ರಲ್ಲಿ ಭಾರತೀಯ ಪ್ಯಾರಾಲಿಂಪಿಯನ್‌ಗಳಿಂದ ಸ್ಫೂರ್ತಿ ಪಡೆದ ಅವರು ಕ್ರೀಡೆ ತರಬೇತಿ ಪಡೆದಯಲು ಆರಂಭಿಸಿದ್ದರು.