ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ನಾಲ್ಕು ಕ್ರೀಡೆಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಜಪಾನ್ ನಲ್ಲಿ ಹೆಚ್ಚು ಪ್ರಸಿದ್ಧಿಯಾದ ಕರಾಟೆ ಕೂಡ ಈ ಬಾರಿಯ ಒಲಿಂಪಿಕ್ಸ್ ಗೆ ಸೇರ್ಪಡೆಯಾಗ್ತಿದೆ. ಇದರೊಂದಿಗೆ ಸರ್ಫಿಂಗ್, ಸ್ಕೇಟ್ ಬೋರ್ಡಿಂಗ್ ಮತ್ತು ಸ್ಪೋರ್ಟ್ ಕ್ಲೈಂಬಿಂಗ್ ಸ್ಪರ್ಧೆಗಳನ್ನು ಕೂಡ ಪರಿಚಯಿಸಲಾಗಿದೆ.
1970 ರಿಂದಲೂ ಕರಾಟೆಯನ್ನು ಒಲಿಂಪಿಕ್ಸ್ ಗೆ ಸೇರಿಸಲು ಪ್ರಯತ್ನ ನಡೆಸಲಾಗಿತ್ತು. ಆತ್ಮರಕ್ಷಣೆಯ ಸಾಧನವಾಗಿರುವ ಕರಾಟೆಯನ್ನು ಕೂಡ ಟೊಕಿಯೋ ಒಲಿಂಪಿಕ್ಸ್ ಗೆ ಸೇರ್ಪಡೆ ಮಾಡಲಾಗುತ್ತಿದೆ.
ಇನ್ನೂ ಸಾಗರದ ಅಡೆ ತಡೆಗಳನ್ನು ದಾಟುವ ಸರ್ಫಿಂಗ್ ಕ್ರೀಡೆಯಲ್ಲಿ ನಿಗದಿತ ಸಮಯದಲ್ಲಿ ಕ್ರೀಡಾಪಟುಗಳು ನೀಡುವ ಪ್ರದರ್ಶನವನ್ನು ಆಧರಿಸಿ ಅಂಕ ನಿಗದಿ ಮಾಡಲಾಗುತ್ತದೆ. ಈ ಕ್ರೀಡೆಗಳ ಜೊತೆಗೆ ಕಳೆದ ಆವೃತ್ತಿಗಳಲ್ಲಿ ಕೈಬಿಡಲಾಗಿದ್ದ ಬೇಸ್ ಬಾಲ್ ಸ್ಪರ್ಧೆ ಈ ಬಾರಿ ಒಲಿಂಪಿಕ್ಸ್ ನಲ್ಲಿ ನಡೆಯಲಿದೆ.
ಇವುಗಳೊಂದಿಗೆ 3X3 ಬಾಸ್ಕೆಟ್ ಬಾಲ್, ಫ್ರೀ ಸ್ಟೈಲ್ ಬಿಎಂಎಕ್ಸ್, ಮ್ಯಾಡಿಸನ್ ಸೈಕ್ಲಿಂಗ್ ಸ್ಪರ್ಧೆಗಳನ್ನು ಕೂಡ ನಡೆಸಲಾಗುವುದು.