ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಭರವಸೆಯನ್ನು ಭಾರತದ ಮಹಿಳಾ ಹಾಕಿ ತಂಡ ಉಳಿಸಿಕೊಂಡಿದೆ. ಭಾರತ ತಂಡ, ಐರ್ಲೆಂಡ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿದೆ.
ಮೊದಲು ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ತಂಡಕ್ಕೆ ಕೊನೆಯ ನಿಮಿಷದಲ್ಲಿ ನವನೀತ್ ಕೌರ್ ಗೋಲು, ಗೆಲುವಿಗೆ ನೆರವಾಯಿತು. ಆಟದ 57ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲ್ ಮಾಡಿದ್ರು. ಇದಕ್ಕೂ ಮೊದಲು ಭಾರತಕ್ಕೆ ಸಿಕ್ಕ 14 ಪೆನಾಲ್ಟಿ ವ್ಯರ್ಥವಾಗಿತ್ತು. ಇದಕ್ಕೂ ಮುನ್ನ ಭಾರತ, ವಿಶ್ವದ ನಂಬರ್ ಒನ್ ತಂಡ ನೆದರ್ಲ್ಯಾಂಡ್ ವಿರುದ್ಧ 5-1 ರಿಂದ ಸೋಲುಂಡಿತ್ತು. ಜರ್ಮನಿ 2-0 ಅಂತರದಲ್ಲಿ ಭಾರತ ತಂಡವನ್ನು ಸೋಲಿಸಿತ್ತು. ಹಾಲಿ ಚಾಂಪಿಯನ್ ಯುಕೆ 4-1ರಿಂದ ಭಾರತವನ್ನು ಸೋಲಿಸಿತ್ತು.
ಶನಿವಾರ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಲಿದೆ. ಈ ಪಂದ್ಯದಲ್ಲಿ ಗೆಲುವಿನ ಜೊತೆ ಗೋಲ್ ಸರಾಸರಿ ಉತ್ತಮವಾಗಿರಬೇಕು. ಇದಲ್ಲದೆ ಯುಕೆ ತಂಡ, ಐಲ್ಯಾಂಡ್ ತಂಡವನ್ನು ಸೋಲಿಸಿದಲ್ಲಿ ಮಾತ್ರ ಭಾರತ ಮುಂದಿನ ಸುತ್ತಿಗೆ ಹೆಜ್ಜೆಯಿಡಲಿದೆ.