ಮಹಿಳಾ ಸಿಬ್ಬಂದಿಗೆ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನ್ ರಾಜಿನಾಮೆ ನೀಡಿದ್ದಾರೆ.
ಕುಟುಂಬ ಮತ್ತು ಕ್ರಿಕೆಟ್ ದೃಷ್ಟಿಯಿಂದ ನಾನು ನಾಯಕತ್ವ ತೊರೆಯುವ ನಿರ್ಧಾರ ಪ್ರಕಟಿಸುತ್ತಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ ಎಂದು ಟಿಮ್ ಪೈನ್ ಹೇಳಿದ್ದಾರೆ. 2017ರಲ್ಲಿ ಮಹಿಳಾ ಕ್ರಿಕೆಟ್ ಸಿಬ್ಬಂದಿಗೆ ಅಶ್ಲೀಲ ಚಿತ್ರ ಮತ್ತು ಮೆಸೇಜ್ ಕಳುಹಿಸಿದ್ದು ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಟಾಸ್ಮೇನಿಯಾ ಕ್ರಿಕೆಟ್ ತನಿಖೆ ನಡೆಸಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
2018 ರಲ್ಲಿ ಟಿಮ್ ಪೈನ್ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಮತ್ತೆ ಪ್ರಕರಣ ತನಿಖೆ ಆರಂಭಿಸಲಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಮ್ಮನ್ನು ನಾಯಕತ್ವದಿಂದ ತೆಗೆಯುವ ಮೊದಲು ಅವರೇ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ 8 ರಿಂದ ಆರಂಭವಾಗಲಿರುವ ಆಶಸ್ ಸರಣಿಗೆ ತಂಡ ಪ್ರಕಟಿಸಲಾಗಿದ್ದು, ಟಿಮ್ ಪೈನ್ ನಾಯಕರಾಗಿದ್ದರು.