ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗ್ತಿದೆ. ಕೊರೊನಾ ಮಧ್ಯೆ ಐಪಿಎಲ್ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆಟಗಾರರು ಹಾಗೂ ಸಿಬ್ಬಂದಿ ರಕ್ಷಣೆಗಾಗಿ ಬಯೋ ಸೆಕ್ಯೂರ್ ಬಬಲ್ ನಿರ್ಮಿಸಲಾಗಿದೆ. ಬ್ರಾಡ್ ಕಾಸ್ಟರ್ ತಂಡ ಮಾತ್ರ ಆಟಗಾರರ ಸಮೀಪ ಬರಲಿದೆ. ಇದೇ ಕಾರಣಕ್ಕೆ ಬ್ರಾಡ್ ಕಾಸ್ಟರ್ ತಂಡಕ್ಕೆ 10 ಸಾವಿರಕ್ಕೂ ಹೆಚ್ಚು ಆರ್ಟಿಪಿಸಿಆರ್ ಪರೀಕ್ಷೆ ನಡೆಯಲಿದೆ.
ಪಂದ್ಯಾವಳಿ ವೇಳೆ ಯಾವುದೇ ವ್ಯಕ್ತಿಗೆ ನೆಗಡಿ, ಶೀತ, ಜ್ವರ ಕಂಡು ಬಂದಲ್ಲಿ ಅವರು ಹಾಗೂ ಅವರ ಸಮೀಪಕ್ಕೆ ಬರುವವರನ್ನು ಪ್ರತ್ಯೇಕವಾಗಿಡಲಾಗುವುದು. ಬಯೋ ಬಬಲ್ ಪ್ರವೇಶಿಸುವ ಮೊದಲು ಕೋವಿಡ್ ವರದಿ ನಕಾರಾತ್ಮಕವಾಗಿರಬೇಕು. ಇದರ ನಂತರ ಎಲ್ಲರನ್ನು ಏಳು ದಿನಗಳ ಕಾಲ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿಡಲಾಗುವುದು. ನಂತ್ರ ಬಯೋ ಬಬಲ್ ಪ್ರವೇಶಿಸಲು ಅನುಮತಿಸಲಾಗುತ್ತದೆ.
ಈ ಬಾರಿ ಐಪಿಎಲ್ ನಲ್ಲಿ 53 ಪಂದ್ಯಗಳು ನಡೆಯಲಿವೆ. 15 ದಿನಗಳ ಮೊದಲೇ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗಿದೆ. ಸುಮಾರು 70ರಿಂದ 90 ದಿನಗಳ ಕಾಲ ಸಿಬ್ಬಂದಿ ಬಯೋ ಬಬಲ್ ನಲ್ಲಿ ಇರಲಿದ್ದಾರೆ. ಕ್ರಿಕೆಟರ್ಸ್ 60ರ-65 ದಿನಗಳವರೆಗೆ ಬಯೋ ಬಬಲ್ ನಲ್ಲಿ ಇರಲಿದ್ದಾರೆ. ಕ್ರಿಕೆಟರ್ ಗಿಂತ ಸಿಬ್ಬಂದಿ ಮೇಲೆ ಕೆಲಸದ ಹೊರೆ ಹೆಚ್ಚಿರುತ್ತದೆ.