
ಬೆಂಗಳೂರು: ಭಾರತ – ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಬೇಕಿದ್ದ 5ನೇ ಟಿ20 ಪಂದ್ಯ ರದ್ದುಗೊಂಡ ಹಿನ್ನೆಲೆಯಲ್ಲಿ ಜುಲೈ 1 ರಿಂದ 3 ರವರೆಗೆ ಹಣ ವಾಪಸ್ ಪಡೆಯಬಹುದಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ. ಪಂದ್ಯದ ಟಿಕೆಟ್ ಖರೀದಿಸಿದವರಿಗೆ ಶೇಕಡ 50 ರಷ್ಟು ಹಣ ವಾಪಸ್ ನೀಡಲಾಗುವುದು. ಜೂನ್ 19 ರಂದು ಮಳೆಯಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಿದ್ದ ಟಿ20 ಪಂದ್ಯ ರದ್ದಾಗಿತ್ತು.