ಭಾರತದಲ್ಲಿ ಕೋವಿಡ್ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ದೇಶವಾಸಿಗಳ ಕುರಿತಂತೆ ಕಾಳಜಿ ವ್ಯಕ್ತವಾಗಿದೆ.
ಹಿರಿಯ ನಾಗರಿಕರಿಗೆ ಮಹತ್ವದ ಮಾಹಿತಿ: NPS ಖಾತೆಯಿಂದ ಹಣ ವಿತ್ ಡ್ರಾ ಮಾಡುವ ನಿಯಮದಲ್ಲಾಗಲಿದೆ ಬದಲಾವಣೆ
ಬ್ರಿಟನ್‌ನಲ್ಲಿ ನೆಲೆಸಿರುವ ಭಾರತ ಮೂಲದ ಅಥ್ಲೀಟ್ ರಾಮ ಗುಡಿಮೆಟ್ಲ, ಇದೇ ವಿಚಾರವಾಗಿ ತಮ್ಮ ಅಳಿಲುಸೇವೆ ಮಾಡಲು ಮುಂದೆ ಬಂದಿದ್ದು, 100 ದಿನಗಳ ಮಟ್ಟಿಗೆ ಪ್ರತಿನಿತ್ಯ 10 ಕಿಮೀ ಓಡಿ, ಭಾರತಕ್ಕೆ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ಪೂರೈಸಲು ತಾವು ನಡೆಸುತ್ತಿರುವ ದೇಣಿಗೆ ಸಂಗ್ರಹದ ಕಾರ್ಯಕ್ಕೆ ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲಾಕ್ ಡೌನ್ ನಲ್ಲಿ ಮಾಡಿ ಎಗ್ ನೂಡಲ್ಸ್
“ನಾವು ಈ ಸಂದರ್ಭದಲ್ಲಿ ಮಾಡಬಹುದಾದ ಅತಿ ದೊಡ್ಡ ವ್ಯತ್ಯಾಸವೆಂದರೆ ಆಸ್ಪತ್ರೆಗಳಿಗೆ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ತ್ವರಿತವಾಗಿ ಕ್ರೋಢೀಕರಿಸುವುದು. ಆಮ್ಲಜನಕದ ಸಿಲಿಂಡರ್‌ಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರವೇ ಆಮ್ಲಜನಕವಿದ್ದರೆ, ಕಾನ್ಸಂಟ್ರೇಟರ್‌ಗಳು ಗಾಳಿಯಲ್ಲಿರುವ ಆಮ್ಲಜನಕವನ್ನು ಮರುಬಳಕೆ ಮಾಡುತ್ತಾ ರೋಗಿಗಳಿಗೆ ಅಡಚಣೆಯಿಲ್ಲದೇ ಆಮ್ಲಜನಕ ಪೂರೈಕೆ ಮಾಡಲು ನೆರವಾಗುತ್ತವೆ” ಎನ್ನುವ ಗುಡಿಮೆಟ್ಲ, ತಮ್ಮ ಕೈಂಕರ್ಯದಿಂದ ಇದುವರೆಗೂ 780 ಪೌಂಡ್ (80,000 ರೂಪಾಯಿ) ಸಂಗ್ರಹಿಸಿದ್ದು, 1000 ಪೌಂಡ್ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ.