
ಹಚ್ಚಹಸಿರ ಹುಲ್ಲುಗಾವಲಿನ ಹಿಂದೆ ಹಸಿರ ಹೊದಿಕೆ ಹೊದ್ದಿರುವ ಬೆಟ್ಟಗುಡ್ಡಗಳು.. ಅವುಗಳ ಹಿಂದೆ ನೀಲಾಕಾಶ….ಇಂತಹ ಸುಂದರ ಪ್ರಕೃತಿಯ ಮಡಿಲಿನಲ್ಲಿ ಕ್ರಿಕೆಟ್ ಆಡಿದರೆ ಹೇಗಿರುತ್ತದೆ…?
ಹೌದು, ಇಂತಹ ಕ್ರಿಕೆಟ್ ಕ್ರೀಡಾಂಗಣ ಇದೀಗ ಕಾಶ್ಮೀರದಲ್ಲಿ ಸಿಕ್ಕಿದೆ. ಕಾಶ್ಮೀರದ ಬುಡ್ಗಂ ಜಿಲ್ಲೆಯಲ್ಲಿರುವ ಕ್ರೀಡಾಂಗಣದ ಫೋಟೋ ಇದೀಗ ವೈರಲ್ ಆಗಿದೆ. ಟ್ವೀಟ್ ಬಳಕೆದಾರರೊಬ್ಬರು ಪ್ರಕೃತಿ ಮಡಿಲಿನಲ್ಲಿ ಇರುವ ಈ ಕ್ರೀಡಾಂಗಣದ ಫೋಟೋ ಶೇರ್ ಮಾಡಿದ್ದಾರೆ.
ನಸೀರ್ ಬಾಬಾ ಅವರು ತೆಗೆದಿರುವ ಈ ಫೋಟೋವನ್ನು ಇಎಸ್‌ಪಿಎನ್ ಶೇರ್ ಮಾಡಿದ್ದು, ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣ ಎಂದು ಹೇಳಿದೆ. ಇದೀಗ ಈ ಫೋಟೋ ಭಾರಿ ವೈರಲ್ ಆಗಿದೆ. ಈ ಫೋಟೋವನ್ನು ಸಾವಿರಾರು ಮಂದಿ ಲೈಕ್ ಹಾಗೂ ಶೇರ್ ಮಾಡಿದ್ದಾರೆ.