
ಭಾರತ-ಇಂಗ್ಲೆಂಡ್ ಟಿ-20 ಸರಣಿ ಗೆಲುವಿನ ನಂತ್ರ ಕೊಹ್ಲಿ ಪಡೆ ಉತ್ಸಾಹದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗ್ತಿದೆ. ತಂಡ ಅಹಮದಾಬಾದ್ ನಿಂದ ಪುಣೆಗೆ ಬಂದಿದೆ.
ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟೀಂ ಇಂಡಿಯಾದ ಪ್ರಯಾಣದ ವಿಡಿಯೋವನ್ನು ಹಂಚಿಕೊಂಡಿದೆ. ಅಹಮದಾಬಾದ್ ನಿಂದ ಪುಣೆಗೆ ಹೋಗುವ ವೇಳೆ ಟೀಂ ಇಂಡಿಯಾ ಆಟಗಾರರು ವಿಶೇಷ ಎಚ್ಚರಿಕೆ ವಹಿಸಿದ್ದಾರೆ. ವಿಮಾನ ಸಿಬ್ಬಂದಿ ಪಿಪಿಇ ಕಿಟ್ ಧರಿಸಿರುವುದು ವಿಡಿಯೋದಲ್ಲಿ ಕಾಣ್ತಿದೆ.
ಭಾನುವಾರ ಮಹಾರಾಷ್ಟ್ರದಲ್ಲಿ 30,535 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಟಗಾರರ ಸುರಕ್ಷತೆಗಾಗಿ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಏಕದಿನ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ-ಇಂಗ್ಲೆಂಡ್ ಮಧ್ಯೆ ಮಾರ್ಚ್ 23ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ ಮಾರ್ಚ್ 26ರಂದು ನಡೆಯಲಿದೆ. ಕೊನೆ ಪಂದ್ಯ ಮಾರ್ಚ್ 28ರಂದು ನಡೆಯಲಿದೆ.