alex Certify BREAKING NEWS: ರಾಹುಲ್ ಶತಕ, ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್; ಭಾರತ 336/6 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಾಹುಲ್ ಶತಕ, ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್; ಭಾರತ 336/6

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲುವಿಗೆ 337 ರನ್ ಗುರಿ ನೀಡಿದೆ.

ಟೀಂ ಇಂಡಿಯಾ ಪರ ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಆಕರ್ಷಕ ಶತಕ ಗಳಿಸಿದ್ದಾರೆ. ರಿಷಬ್ ಪಂತ್ 40 ಎಸೆತಗಳಲ್ಲಿ 7 ಸಿಕ್ಸರ್, 3 ಬೌಂಡರಿ ಒಳಗೊಂಡ 77 ರನ್ ಸಿಡಿಸಿದ್ದಾರೆ.

ರೋಹಿತ್ ಶರ್ಮಾ 25, ಶಿಖರ್ ಧವನ್ 4, ವಿರಾಟ್ ಕೊಹ್ಲಿ 66, ಕೆ.ಎಲ್. ರಾಹುಲ್ 108, ರಿಷಬ್ ಪಂತ್ 77, ಹಾರ್ದಿಕ್ ಪಾಂಡ್ಯ 35, ಕೃನಾಲ್ ಪಾಂಡ್ಯ ಅಜೇಯ 12, ಶಾರ್ದೂಲ್ ಠಾಕೂರ್ ಅಜೇಯ 0 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್ 1, ರೀಸ್ ಟೋಪ್ಲಿ 2 ಟಾಮ್ ಕರ್ರನ್ 2, ಆದಿಲ್ ರಶೀದ್ 1 ವಿಕೆಟ್ ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...