ಸಂಸತ್ ನಿಂದ ಹಿಡಿದು ಟೀಂ ಇಂಡಿಯಾವರೆಗೆ ಎಲ್ಲೆಡೆ ರೈತರ ಆಂದೋಲನದ ಬಗ್ಗೆ ಚರ್ಚೆಯಾಗ್ತಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೈತರ ಆಂದೋಲನದ ಬಗ್ಗೆ ಮಾತನಾಡಿದ್ದಾರೆ.
ರೈತರ ಆಂದೋಲನದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ತಂಡದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದು ಕೊಹ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಬುಧವಾರ ಕೊಹ್ಲಿ ಟ್ವಿಟ್ ಮಾಡಿದ್ದರು. ಭಿನ್ನಾಭಿಪ್ರಾಯದ ಈ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿರಬೇಕು. ರೈತರು ನಮ್ಮ ದೇಶದ ಒಂದು ಭಾಗ. ಎಲ್ಲ ಪಕ್ಷದವರು ಒಮ್ಮತಕ್ಕೆ ಬಂದು ಶಾಂತಿ ನೆಲೆಸಿ, ಎಲ್ಲರೂ ಒಟ್ಟಾಗುತ್ತಾರೆಂಬ ವಿಶ್ವಾಸವಿದೆ ಎಂದು ಕೊಹ್ಲಿ ಟ್ವಿಟ್ ಮಾಡಿದ್ದರು.
ರೈತರ ಆಂದೋಲದ ಬಗ್ಗೆ ಇಡೀ ವಿಶ್ವವೇ ಮಾತನಾಡ್ತಿದೆ. ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದರು. ಭಾರತದ ಸಮಸ್ಯೆ ಭಾರತೀಯರಿಗೆ ಮಾತ್ರ ಗೊತ್ತು. ಇದನ್ನು ಭಾರತೀಯರೇ ಬಗೆಹರಿಸಿಕೊಳ್ಳಬೇಕು. ಬನ್ನಿ ಎಲ್ಲರೂ ಒಟ್ಟಾಗಿರೋಣವೆಂದು ಸಚಿನ್ ಹೇಳಿದ್ದರು.