ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತದ ನೆರವಿಗೆ ನಿಂತ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಒಂಬತ್ತನೇ ವಿಕೆಟ್‌ಗೆ ಪಾಲುದಾರಿಕೆಯಲ್ಲಿ ತಂಡದ ಮುನ್ನಡೆಯನ್ನು 281ರನ್‌ಗಳಿಗೆ ಏರಿಸಿದ್ದಾರೆ.
ಮೊಹಮ್ಮದ್ ಶಮಿ ಇದೇ ವೇಳೆ ಅರ್ಧ ಶತಕ ಬಾರಿಸಿದರೆ, ಬುಮ್ರಾ ಈತನಿಗೆ ಸ್ಟಾಂಡಿಂಗ್ ಕೊಟ್ಟಿದ್ದಾರೆ. ಒಂದು ಹಂತದಲ್ಲಿ, 181 ರನ್‌ಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತದ ಸ್ಕೋರ್ ಅನ್ನು 298ರನ್‌ಗಳಿಗೆ ಹಿಗ್ಗಿಸಿ ಡಿಕ್ಲೇರ್ ಮಾಡುವಂತೆ ಆಡಿದ್ದಾರೆ ಈ ವೇಗಿಗಳು.
ಮರುಬಳಕೆ ಇಂಧನಕ್ಕಿಂತಲೂ ನಿಸರ್ಗಕ್ಕೆ ಹೆಚ್ಚು ಹಾನಿ ಮಾಡಲಿದೆಯೇ ‘ಬ್ಲೂ ಹೈಡ್ರೋಜನ್’…?
ಶಮಿ 70 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿದರೆ ಬುಮ್ರಾ 34 ರನ್‌ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ಇಬ್ಬರೂ ಸೇರಿ ಒಂಬತ್ತನೇ ವಿಕೆಟ್‌ಗೆ ದಾಖಲೆಯ 89 ರನ್ ಸೇರಿಸಿ ಭಾರತಕ್ಕೆ ಪಂದ್ಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದಾರೆ.
ಬುಮ್ರಾ ಹಾಗೂ ಶಮಿಯ ಇಂದಿನ ಜೊತೆಯಾಟವನ್ನು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್‌ರ 376ರನ್ ಪಾಲುದಾರಿಕೆಗೆ ಹೋಲಿಸಿರುವ ಟೀಂ ಇಂಡಿಯಾ ಮಾಜಿ ಆರಂಭಿಕ ವಿರೇಂದ್ರ ಸೆಹ್ವಾಗ್, 20 ವರ್ಷಗಳ ಹಿಂದಿನ ಪಂದ್ಯದ ಫೋಟೋವೊಂದಕ್ಕೆ ಬುಮ್ರಾ ಹಾಗೂ ಶಮಿ ಮುಖಗಳನ್ನು ಮಾರ್ಫ್ ಮಾಡಿದ್ದಾರೆ.