alex Certify 3 ನೇ ಟಿ20: ಕೆಎಲ್ ರಾಹುಲ್ ದಾಖಲೆ ಹಿಂದಿಕ್ಕಿದ ಸೂರ್ಯಕುಮಾರ್ ಭರ್ಜರಿ ಶತಕ, ಶ್ರೀಲಂಕಾಕ್ಕೆ 229 ರನ್ ಗೆಲುವಿನ ಗುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ನೇ ಟಿ20: ಕೆಎಲ್ ರಾಹುಲ್ ದಾಖಲೆ ಹಿಂದಿಕ್ಕಿದ ಸೂರ್ಯಕುಮಾರ್ ಭರ್ಜರಿ ಶತಕ, ಶ್ರೀಲಂಕಾಕ್ಕೆ 229 ರನ್ ಗೆಲುವಿನ ಗುರಿ

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ 3 ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದೆ.

ರಾಜ್‌ ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರವಾಗಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 1, ಶುಭಮನ್ ಗಿಲ್ 46, ರಾಹುಲ್ ತ್ರಿಪಾಠಿ 35, ಸೂರ್ಯಕುಮಾರ್ ಯಾದವ್ ಅಜೇಯ 112, ಹಾರ್ದಿಕ ಪಾಂಡ್ಯ 4, ದೀಪಕ್ ಹೂಡ 4, ಅಕ್ಷರ್ ಪಟೇಲ್ ಅಜೇಯ 21 ರನ್ ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಗಳಿಸುವ ಕೆಎಲ್ ರಾಹುಲ್ ವೇಗದ ಶತಕದ ದಾಖಲೆ ಮುರಿದಿದ್ದಾರೆ. ರೋಹಿತ್ ಶರ್ಮಾ ನಂತರ 50 ಎಸೆತಗಳಿಗಿಂತ ಕಡಿಮೆ ಎಸೆತಗಳಲ್ಲಿ ಟಿ20 ಶತಕ ಪೂರೈಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.

ಕೆಎಲ್ ರಾಹುಲ್ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 46 ಎಸೆತಗಳಲ್ಲಿ ತಮ್ಮ ವೇಗದ ಶತಕ ಸಿಡಿಸಿದರು, ಸೂರ್ಯಕುಮಾರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಶ್ರೀಲಂಕಾ ವಿರುದ್ಧ ಶತಕ ಪೂರ್ಣಗೊಳಿಸಲು ಕೇವಲ 45 ಎಸೆತಗಳನ್ನು ತೆಗೆದುಕೊಳ್ಳುವ ಮೂಲಕ ವೇಗದ ಟಿ20 ಶತಕಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

2017 ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ಶತಕವನ್ನು ಪೂರ್ಣಗೊಳಿಸಲು ಕೇವಲ 35 ಎಸೆತಗಳನ್ನು ಎದುರಿಸಿದ್ದು, ವೇಗದ ಟಿ20 ಶತಕದ ದಾಖಲೆ ಹೊಂದಿದ ಭಾರತೀಯ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...