
ಮುಂಬೈನ ಡ್ರ್ಯಾಗನ್ ಫ್ಲೈ ಪಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕೆ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಹಲವರ ವಿರುದ್ಧ ಐಪಿಸಿ ಸೆಕ್ಷನ್ 188, 269, 34 ಮತ್ತು ಎನ್‌ಎಂಡಿಎ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರೈನಾ ಜೊತೆಗೆ ಗಾಯಕ ಗುರು ರಾಂಧವ ಸೇರಿದಂತೆ ಹಲವರು ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಬ್ರಿಟನ್ನಲ್ಲಿ ಕೊರೊನಾ ರೂಪಾಂತರಗೊಂಡಿರುವ ಬೆನ್ನಲ್ಲೇ ಪುರಸಭೆ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿತ್ತು.