ಸುಪ್ರೀಂ ಕೋರ್ಟ್ನಲ್ಲಿಂದು ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಜಯ್ ಷಾ ಭವಿಷ್ಯ ನಿರ್ಧಾರವಾಗಲಿದೆ. ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಗಂಗೂಲಿ ಹಾಗೂ ಷಾರನ್ನ ಕೂಲಿಂಗ್ ಆಫ್ ಅವಧಿಯಲ್ಲಿರಿಸಬೇಕೆ ಬೇಡವೇ ಎಂಬುದರ ಬಗ್ಗೆ ಬಿಸಿಸಿಐ ಸಲ್ಲಿಸಿರುವ ಮನವಿಯಲ್ಲಿ ಸುಪ್ರೀಂ ಕೋರ್ಟ್ ಇಂದು ಆಲಿಸಲಿದೆ .
ಬಿಸಿಸಿಐ ತನ್ನ ನಿಯಮಾವಳಿಗಳನ್ನ ಬದಲಿಸಿದ ಬಳಿಕ ಸೌರವ್ ಗಂಗೂಲಿ ಹಾಗೂ ಷಾರನ್ನ ಕ್ರಮವಾಗಿ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ 2019ರಲ್ಲಿ ನೇಮಿಸಲಾಯಿತು. ಬಿಸಿಸಿಐನ ಹೊಸ ಸಂವಿಧಾನದ ಪ್ರಕಾರ ಬಿಸಿಸಿಐನ ರಾಜ್ಯ ಸಂಘ ಇಲ್ಲವೇ ಮಂಡಳಿಯಲ್ಲಿ ಆರು ವರ್ಷಗಳ ಕಾಲ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ ಅವರು ಮೂರು ವರ್ಷಗಳ ಕಾಲ ಕಡ್ಡಾಯವಾಗಿ ಕೂಲಿಂಗ್ ಆಫ್ ಅವಧಿಯಲ್ಲಿ ಇರಬೇಕಾಗುತ್ತೆ.
ಸೌರವ್ ಗಂಗೂಲಿ 2014ರಿಂದ ಬಂಗಾಳ ಕ್ರಿಕೆಟ್ ಸಂಘದ ಹುದ್ದೆ ಅಲಂಕರಿಸಿದ್ದರೆ, ಷಾ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ನಲ್ಲಿ 2013ರಿಂದ ಪದಾಧಿಕಾರಿಯಾಗಿದ್ದರು. ಇದೀಗ ಇವರಿಬ್ಬರ ಆರು ವರ್ಷಗಳ ಅವಧಿ ಪೂರ್ಣಗೊಳ್ಳಲು ಕೆಲ ತಿಂಗಳುಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಇವರಿಬ್ಬರು ಬಿಸಿಸಿಐನ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ ಹಾಗೂ ಬಿಸಿಸಿಐ ನಿಯಮಾವಳಿ ಇವರಿಬ್ಬರಿಗೆ ಕೂಲಿಂಗ್ ಆಫ್ ಅವಧಿಗೆ ಹೋಗುವಂತೆ ಆದೇಶ ನೀಡಿದೆ .
ಆದರೆ ಈಗ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಬಿಸಿಸಿಐ ಮನವಿಗೆ ಸುಪ್ರೀಂ ಅಸ್ತು ಎಂದರೆ ಸೌರವ್ ಹಾಗೂ ಷಾ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತೆ.