ಬರ್ಮಿಂಗ್ಹ್ಯಾಮ್ ನಲ್ಲಿ ಜುಲೈ 28ರಂದು 2022ರ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಲಿವೆ. ನಿಗದಿಯಾಗಿರುವ ದಿನಕ್ಕಿಂತ ಒಂದು ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭಿಸಲು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಕಾರ್ಯನಿರ್ವಾಹಕ ಮಂಡಳಿ ತೀರ್ಮಾನ ಕೈಗೊಂಡಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮುಗಿದ ನಂತರ ಅಥ್ಲೀಟ್ ಗಳಿಗೆ ವಿಶ್ರಾಂತಿ ಅವಧಿ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಕಾಮನ್ ವೆಲ್ತ್ ಕ್ರೀಡೆಗಳು ಜುಲೈ 27 ರಂದು ಆರಂಭವಾಗುವ ಬದಲು 28 ರಿಂದ ಶುರುವಾಗಲಿದೆ.
ಜುಲೈ 15 ರಿಂದ 24ರವರೆಗೆ ಅಮೆರಿಕದ ಒರೆಗಾನ್ ನಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಡೆಯಲಿದೆ. ಜುಲೈ 6 ರಿಂದ 31ರವರೆಗೆ ಇಂಗ್ಲೆಂಡ್ನಲ್ಲಿ ಯುಇಎಫ್ಎ ಮಹಿಳಾ ಫುಟ್ ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. ಟೋಕಿಯೋದಲ್ಲಿ ನಿಗದಿಯಾಗಿದ್ದ ಒಲಂಪಿಕ್ ಕ್ರೀಡಾ ಕೂಟವನ್ನು ಕೊರೋನಾ ಕಾರಣದಿಂದ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.