ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 38 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1 -0 ಮುನ್ನಡೆ ಗಳಿಸಿದೆ.
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಶಿಖರ್ ಧವನ್ 46, ಸಂಜು ಸ್ಯಾಮ್ಸನ್ 27, ಸೂರ್ಯಕುಮಾರ್ 50 ಮತ್ತು ಇಶಾನ್ ಕಿಶನ್ ಅಜೇಯ 20 ರನ್ ಗಳಿಸಿದರು.
ಪೃಥ್ವಿ ಶಾ ಮತ್ತು ವರುಣ್ ಚಕ್ರವರ್ತಿ ಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ 18. 3 ಓವರುಗಳಲ್ಲಿ 126 ರನ್ ಗಳಿಸಿತು. ಆವಿಷ್ಕಾ 26, ಚರಿತ್ ಅಸಲಂಕ 44, ದೆಸುನ್ ಶನಕ 16 ರನ್ ಗಳಿಸಿದರು. ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 4, ದೀಪಕ್ ಚಹರ್ 2, ಕೃನಾಲ್ ಪಾಂಡ್ಯ, ವರುಣ್ ಚಕ್ರವರ್ತಿ, ಚಾಹಲ್ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.