alex Certify ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ

ಬೆಂಗಳೂರು: 2021 ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ  ಪ್ರಶಸ್ತಿ ಹಾಗೂ 2022 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರಕಟಿಸಲಾಗಿದೆ.

ಕ್ರೀಡಾ ಸಾಧಕರಿಗೆ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಪ್ರಕಟಿಸಿದ್ದಾರೆ.

ನಾಳೆ ರಾಜಭವನದ ಗಾಜಿನಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಕ್ರೀಡಾರತ್ನ ಪ್ರಶಸ್ತಿ

ಕವನ ಎಂ.ಎಂ- ಬಾಲ್ ಬ್ಯಾಡ್ಮಿಂಟನ್

ಬಿ ಗಜೇಂದ್ರ – ಗುಂಡು ಎತ್ತುವುದು

ಶ್ರೀಧರ್ – ಕಂಬಳ

ರಮೇಶ್ ಮಳವಾಡ್- ಖೋಖೋ

ವೀರಭದ್ರ ಮುಧೋಳ್- ಮಲ್ಲಕಂಬ

ಖುಷಿ ಹೆಚ್ – ಯೋಗ

ಲೀನಾ ಅಂತೋಣಿ ಸಿದ್ದಿ- ಮಟ್ಟಿ ಕುಸ್ತಿ

ದರ್ಶನ್-ಕಬ್ಬಡಿ.

ಏಕಲವ್ಯ ಪ್ರಶಸ್ತಿ

ಚೇತನ್ ಬಿ- ಅಥ್ಲೆಟಿಕ್ಸ್

ಶಿಖಾ ಗೌತಮ್- ಬ್ಯಾಡ್ಮಿಂಟನ್

ಕೀರ್ತಿ ರಂಗಸ್ವಾಮಿ-ಸೈಕ್ಲಿಂಗ್

ಅದಿತ್ರಿ ವಿಕ್ರಾಂತ್ ಪಾಟೀಲ್- ಫೆನ್ಸಿಂಗ್

ಅಮೃತ್ ಮುದ್ರಾಬೆಟ್- ಜಿಮ್ನಾಸ್ಟಿಕ್

ಶೇಷೇಗೌಡ-ಹಾಕಿ

ರೇಷ್ಮಾ ಮರೂರಿ- ಲಾನ್ ಟೆನ್ನಿಸ್

ಟಿಜೆ ಶ್ರೀಜಯ್- ಶೂಟಿಂಗ್

ತನೀಷ್ ಜಾರ್ಜ್ ಮ್ಯಾಥ್ಯೂ-ಈಜು

ಯಶಸ್ವಿನಿ ಘೋರ್ಪಡೆ- ಟೇಬಲ್ ಟೆನ್ನಿಸ್

ಹರಿಪ್ರಸಾದ್‌ – ವಾಲಿಬಾಲ್

ಸೂರಜ್ ಸಂಜು ಅಣ್ಣಿಕೇರಿ- ಕುಸ್ತಿ

ಹೆಚ್ ಎಸ್ ಸಾಕ್ಷತ್- ನೆಟ್ ಬಾಲ್

ಮನೋಜ್ ಬಿಎಂ- ಬ್ಯಾಸ್ಕೆಟ್ ಬಾಲ್

ರಾಘವೇಂದ್ರ ಎಂ- ಪ್ಯಾರಾ ಅಥ್ಲೆಟಿಕ್ಸ್

ಜೀವಮಾನ ಸಾಧನೆ ಪ್ರಶಸ್ತಿ.

ಅಲ್ಕಾ ಎನ್ ಪಡುತಾರೆ- ಸೈಕ್ಲಿಂಗ್

ಬಿ ಆನಂದ್ ಕುಮಾರ್- ಪ್ಯಾರಾ ಬ್ಯಾಡ್ಮಿಂಟನ್

ಶೇಖರಪ್ಪ-ಯೋಗ

ಅಶೋಕ್ ಕೆಸಿ – ವಾಲಿಬಾಲ್

ರವೀಂದ್ರ ಶೆಟ್ಟಿ- ಕಬಡ್ಡಿ

ಬಿಜೆ ಅಮರನಾಥ್- ಯೋಗ

ಕ್ರೀಡಾ ಪೋಷಕ ಪ್ರಶಸ್ತಿ

ಬಿ.ಎಂ.ಎಸ್. ಮಹಿಳಾ ಕಾಲೇಜು- ಬೆಂಗಳೂರು ನಗರ ಜಿಲ್ಲೆ

ಮಂಗಳ ಫ್ರೆಂಡ್ಸ್ ಸರ್ಕಲ್- ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ

ನಿಟ್ಟೆ ಎಜುಕೇಷನ್ ಟ್ರಸ್ಟ್-ಉಡುಪಿ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...