ನವದೆಹಲಿ: ಕುಟುಂಬದ ಹಸಿವು ನೀಗಿಸಲು ದಿನಗೂಲಿ ಕೆಲಸ ಮಾಡುತ್ತಿದ್ದ ಭಾರತ ಮಹಿಳಾ ತಂಡದ ಪುಟ್ಬಾಲ್ ಆಟಗಾರ್ತಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ನೆರವು ನೀಡಲು ಮುಂದಾಗಿದ್ದಾರೆ.
ಒಂದೊಮ್ಮೆ ಜಾರ್ಖಂಡ್ ಮಹಿಳಾ ಪೂಟ್ ಬಾಲ್ ತಂಡಕ್ಕೆ ಸಂಗೀತಾ ನಾಯಕಿಯಾಗಿದ್ದರು. ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಫುಟ್ಬಾಲ್ ಆಟಗಾರ್ತಿ ಸಂಗೀತಾ ಸೊರೇನ್ ಕುಟುಂಬ ಸಂಕಷ್ಟದಲ್ಲಿದೆ. ಕುಟುಂಬದ ಹಸಿವು ನೀಗಿಸಲು ಸಂಗೀತಾ ಸೊರೇನ್ ಜಾರ್ಖಂಡ್ ನ ಭುಲಿ ಗ್ರಾಮದಲ್ಲಿ ಇಟ್ಟಿಗೆ ತಯಾರಿಸುವ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ.
ಈ ವಿಚಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಗಮನಕ್ಕೆ ಬಂದಿದೆ. ಸಂಗೀತಾ ಸಂಕಷ್ಟದಲ್ಲಿರುವ ಮಾಹಿತಿ ಗೊತ್ತಾಗಿದ್ದು, ಅವರ ಕಚೇರಿಯಿಂದ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಶೀಘ್ರವೇ ಸಂಗೀತಾಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಂಗೀತಾಗೆ ಆರ್ಥಿಕ ಸಹಾಯ ನೀಡಲಾಗುವುದು. ಕ್ರೀಡಾಪಟುಗಳಿಗೆ ಗೌರವಾನ್ವಿತ ಜೀವನವನ್ನು ಖಾತರಿಪಡಿಸುವುದು ನಮ್ಮ ಆದ್ಯತೆಯಾಗಿದೆ.