ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆ ಎರಡು ಪದಕಗಳು ಬಂದಿವೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜುಡೋ ಪಟು ಸುಶೀಲಾದೇವಿ ಲಿಕ್ಮಾಬಾಮ್ ಅವರು ಬೆಳ್ಳಿ ಪದಕ ಗಳಿಸಿದ್ದಾರೆ.
60 ಕೆಜಿ ವಿಭಾಗದಲ್ಲಿ ವಿಜಯಕುಮಾರ್ ಯಾದವ್ ಕಂಚಿನ ಪದಕ ಗೆದ್ದಿದ್ದಾರೆ. ಸುಶೀಲಾದೇವಿ 2014ರ ಗ್ಲಾಸ್ಗೊ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಮಹಿಳೆಯರ ಜೂಡೋ 48 ಕೆಜಿ ಫೈನಲ್ ನಲ್ಲಿ ಶುಶೀಲಾ ದೇವಿ ಬೆಳ್ಳಿ ಗೆದ್ದರು, ಭಾರತಕ್ಕೆ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಏಳನೇ ಪದಕವನ್ನು ತಂದುಕೊಟ್ಟರು.