ಅಹಮದಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ 3ನೇ ಮತ್ತು ಅಂತಿಮ T20 ಯಲ್ಲಿ ಶುಭಮನ್ ಗಿಲ್ ಶತಕ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ನ ಭವಿಷ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಟಿ20ಯಲ್ಲಿ ಗರಿಷ್ಠ ಸ್ಕೋರ್
ಶುಭಮನ್ ಗಿಲ್ ಅವರು ಭಾರತದ ಆಟಗಾರನೊಬ್ಬ ಟಿ20 ಮಾದರಿಯಲ್ಲಿ ಅತ್ಯಧಿಕ ಸ್ಕೋರ್ ಮಾಡಿದ ದಾಖಲೆ ಬರೆದಿದ್ದಾರೆ. ಅವರು ಈ ಇನ್ನಿಂಗ್ಸ್ ನಲ್ಲಿ 63 ಎಸೆತಗಳನ್ನು ಎದುರಿಸಿ ಅಜೇಯ 126 ರನ್ ಗಳಿಸಿದರು. 2022ರ ಏಷ್ಯಾಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು.
ಎಲ್ಲಾ ಮಾದರಿಯಲ್ಲೂ ಶತಕ
ಗಿಲ್ ಈಗ ಪ್ರತಿಯೊಂದು ಮಾದರಿಯಲ್ಲೂ ಶತಕ ಸಿಡಿಸಿದ ಭಾರತದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗಿಲ್ ಗಿಂತ ಮೊದಲು, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಗಿಲ್ ಮೊದಲ ಶತಕ ದಾಖಲಿಸಿದ್ದರು.
ಟಿ20ಯಲ್ಲಿ 100 ರನ್ ಬಾರಿಸಿದ 7ನೇ ಭಾರತೀಯ
ಇಷ್ಟೇ ಅಲ್ಲ, ಗಿಲ್ ಇದೀಗ ಟಿ20 ಮಾದರಿಯಲ್ಲಿ ಶತಕ ಸಿಡಿಸಿದ 7ನೇ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಗಿಲ್ ಗಿಂತ ಮೊದಲು, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಸುರೇಶ್ ರೈನಾ ಭಾರತಕ್ಕಾಗಿ ಟಿ20 ಮಾದರಿಯಲ್ಲಿ ಶತಕಗಳನ್ನು ಗಳಿಸಿದ್ದಾರೆ.