
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮುಂದಿನ ಆವೃತ್ತಿ ಆರಂಬಕ್ಕೆ ಕೆಲವೇ ದಿನಗಳ ಮೊದಲು ಭಾರತ ಕ್ರಿಕೆಟಿಗ ಶಿಖರ್ ಧವನ್ ‘ಸಿಂಗಂ’ ಶೈಲಿಯಲ್ಲಿ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನು ಐಪಿಎಲ್ ಪ್ರಚಾರಕ್ಕಾಗಿ ಚಿತ್ರೀಕರಿಸಿರಬಹುದು ಎಂದು ಹೇಳಲಾಗಿದೆ. ಇನ್ ಸ್ಟಾಗ್ರಾಮ್ ನಲ್ಲಿ ಶಿಖರ್ ಧವನ್ ಅಪ್‌ಲೋಡ್ ಮಾಡಿದ ವಿಡಿಯೋ ರೀಲ್‌ನಲ್ಲಿ, ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ ಹಿನ್ನಲೆಯಲ್ಲಿ ‘ಸಿಂಗಂ’ ಹಾಡಿನೊಂದಿಗೆ ಅವರು ಗೂಂಡಾಗಳೊಂದಿಗೆ ಹೋರಾಡುವುದು ನಂತರ ಗೂಂಡಾಗಳು ಧವನ್‌ಗೆ ಶರಣಾಗುತ್ತಿರುವುದು ಕಂಡುಬಂದಿದೆ.
ಆಲಿ ರೇ ಆಲಿ! ಆತಾ ತುಝಿ ಬಾರಿ ಆಲಿ! ಹೊಸದಕ್ಕಾಗಿ ಶೀಘ್ರದಲ್ಲೇ ಬರಲಿದೆ ಎಂದು ಧವನ್ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.
ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ಮುನ್ನಡೆಸಲಿರುವ ಧವನ್, 206 ಪಂದ್ಯಗಳಲ್ಲಿ 6244 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಐಪಿಎಲ್‌ನಲ್ಲಿ ಎರಡು ಶತಕ ಮತ್ತು 47 ಅರ್ಧಶತಕ ಗಳಿಸಿದ್ದಾರೆ.
https://www.instagram.com/reel/CqAtlipIEKq/?utm_source=ig_web_copy_link